ಎರಡನೇ ಟಿ-20 ಕ್ರಿಕೆಟ್ : ಭಾರತ ವಿರುದ್ಧ ಇಂಗ್ಲೆಂಡ್ ಗೆ ಐದು ವಿಕೆಟ್ ಗಳ ಜಯ

ಸೊಪಿಯಾ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ಐದು ವಿಕೆಟ್ ಗಳ ಅಂತರದಿಂದ ಭಾರತವನ್ನು ಸೋಲಿಸಿದೆ.
ಅಲೆಕ್ಸ್ ಹೆಲ್ಸ್
ಅಲೆಕ್ಸ್ ಹೆಲ್ಸ್
Updated on: 

ಕಾರ್ಡಿಪ್ :  ಸೊಪಿಯಾ ಗಾರ್ಡನ್ಸ್   ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್  ಐದು ವಿಕೆಟ್ ಗಳ ಅಂತರದಿಂದ ಭಾರತವನ್ನು ಸೋಲಿಸಿದೆ.

ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಭಾರತವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು.  ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ  5 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತ್ತು.

ರೋಹಿತ್ ಶರ್ಮಾ 5, ಶಿಖರ್ ಧವನ್ 10, ಕೆ.ಎಲ್. ರಾಹುಲ್ 6,  ವಿರಾಟ್ ಕೊಹ್ಲಿ 47 , ಸುರೇಶ್ ರೈನಾ 27,  ಎಂ.ಎಸ್, ಧೋನಿ 32,  ಹಾರ್ದಿಕ್  ಪಾಂಡ್ಯ 12 ರನ್ ಗಳಿಸಿದರು. ನಾಯಕ ವಿರಾಟ್ ಕೊಹ್ಲಿ ಹಾಗೂ ಸುರೇಶ್ ರೈನಾ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 57 ರನ್ ಕಲೆಹಾಕಿದರು.

 ಈ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ತಂಡ  19. 4  ಓವರ್ ಗಳಲ್ಲಿ  5 ವಿಕೆಟ್ ನಷ್ಟಕ್ಕೆ ..149  ರನ್ ಪಡೆದುಕೊಂಡಿತು. ಅಲೆಕ್ಸ್ ಹೆಲ್ಸ್  58 ರನ್ ಪಡೆಯುವ ಮೂಲಕ ಇಂಗ್ಲೆಂಡ್ ಗೆಲ್ಲಲು ಪ್ರಮುಖ ಕಾರಣರಾದರು.
 ಭಾರತ ಪರ ಉಮೇಶ್ ಯಾದವ್ 2, ಹಾರ್ದಿಕ್ ಪಾಂಡ್ಯ , ಚಾಹಲ್ ತಲಾ 1  ವಿಕೆಟ್ ಪಡೆದುಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com