ಅಂತೆಯೇ ಜವಾಬ್ದಾರಿ ಮರೆತು ಆಡಿದ ಬ್ಯಾಟ್ಸಮನ್ ಗಳ ಕುರಿತು ಟೀಕಿಸಿರುವ ಗವಾಸ್ಕರ್, 'ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ರೋಹಿತ್ ಶರ್ಮಾ ಬೇಜವಾಬ್ದಾರಿ ಹೊಡೆತಕ್ಕೆ ಬಲಿಯಾದರೆ, ಉತ್ತಮವಾಗಿ ಆಡುತ್ತಿದ್ದ ಧವನ್ ಕೆಟ್ಟ ರೀತಿಯಲ್ಲಿ ನಿರ್ಗಮಿಸಿದರು. ಇನ್ನು ಹೊರಹೋಗುತ್ತಿದ್ದ ಚೆಂಡನ್ನು ಕೆಣಕಿದ ರಾಹುಲ್ ತಮ್ಮ ಆಟದಲ್ಲಿ ಇನ್ನಷ್ಟು ಸುಧಾರಣೆ ತಂದುಕೊಳ್ಳಬೇಕಿದೆ. ಅವರು ಹಿಂದಿನ ಪಂದ್ಯದಲ್ಲಿ ಶತಕ ಬಾರಿಸಿರಬಹುದು, ಆದರೆ ಪ್ರತಿ ಹೊಸ ಇನಿಂಗ್ಸ್ ಕೂಡ ಶೂನ್ಯದಿಂದಲೇ ಆರಂಭವಾಗುವುದು. ಸಾಕಷ್ಟು ಅನುಭವಿಯಾದ ರೈನಾ ಇಲ್ಲಿ ಹೇಳಿಕೊಳ್ಳುವ ಮಟ್ಟದಲ್ಲಿ ಆಡಲಿಲ್ಲ' ಎಂದು ಹೇಳಿದ್ದಾರೆ.