ಖಾಸಗಿ ಆಂಗ್ಲ ಪತ್ರಿಕೆಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಪಿಲ್ ದೇವ್, ಟೆಸ್ಟ್ ಕ್ರಿಕೆಟ್ ಗೆ ಆಫ್ಘಾನಿಸ್ತಾನ ಪದಾರ್ಪಣೆ ಮಾಡಿರುವುದು ನಿಜಕ್ಕೂ ಸಂತಸದ ವಿಚಾರ. ಆದರೆ ಆ ತಂಡ ಟೆಸ್ಟ್ ಕ್ರಿಕೆಟ್ ನಲ್ಲಿ ಇನ್ನೂ ಪಳಗಬೇಕಿದೆ. ಇನ್ನು ಆಪ್ಘಾನಿಸ್ತಾನದಲ್ಲಿ ಕ್ರಿಕೆಟ್ ಬೆಳವಣಿಗೆ ಕುರಿತಂತೆ ಬಿಸಿಸಿಐ ನಿರ್ಧಾರ ಶ್ಲಾಘನಾರ್ಹವೇ ಆದರೂ, ಇನ್ನೂ ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಈ ನಿಟ್ಟಿನಲ್ಲಿ ಬಿಸಿಸಿಐ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.