ಬಿಸಿಸಿಐ ಹಂಗಾಮಿ ಕಾರ್ಯದರ್ಶಿಗೆ ಸಿಒಎ ನೊಟೀಸ್

ಕ್ರಿಕೆಟ್ ಉಪಕರಣಗಳಿಗೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಲು ಭೂತಾನ್ ಪ್ರವಾಸಕ್ಕೆ ಬಿಸಿಸಿಐ ಕೈಗೊಂಡಿದ್ದ ನಿರ್ಧಾರ ಈಗ ಸಂಸ್ಥೆಯ ಕಾರ್ಯದರ್ಶಿಗೆ ಸಂಕಷ್ಟ ತಂದೊಡ್ಡಿದೆ.
ಬಿಸಿಸಿಐ ಹಂಗಾಮಿ ಕಾರ್ಯದರ್ಶಿಗೆ ಸಿಒಎ ನೊಟೀಸ್
ಬಿಸಿಸಿಐ ಹಂಗಾಮಿ ಕಾರ್ಯದರ್ಶಿಗೆ ಸಿಒಎ ನೊಟೀಸ್
Updated on
ನವದೆಹಲಿ: ಕ್ರಿಕೆಟ್ ಉಪಕರಣಗಳಿಗೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಲು ಭೂತಾನ್ ಪ್ರವಾಸಕ್ಕೆ ಬಿಸಿಸಿಐ ಕೈಗೊಂಡಿದ್ದ ನಿರ್ಧಾರ ಈಗ ಸಂಸ್ಥೆಯ ಕಾರ್ಯದರ್ಶಿಗೆ ಸಂಕಷ್ಟ ತಂದೊಡ್ಡಿದೆ. 
ವಿನೋದ್ ರಾಯ್ ನೇತೃತ್ವದ ಸಿಒಎ ಬಿಸಿಸಿಐ ನ ಹಂಗಾಮಿ ಕಾರ್ಯದರ್ಶಿಗೆ ನೊಟೀಸ್ ಜಾರಿಗೊಳಿಸಿದ್ದು ಹಂಗಾಮಿ ಕಾರ್ಯದರ್ಶಿಯ ಉಪಸ್ಥಿತಿಯನ್ನು ಪ್ರಶ್ನಿಸಿದ್ದು, ಜುಲೈ 4 ರೊಳಗೆ ನೊಟೀಸ್ ಗೆ ಉತ್ತರಿಸುವಂತೆ ಸೂಚಿಸಿದೆ. 
ಪ್ರಮುಖವಾಗಿ ಎರಡು ಅಂಶಗಳಿಗೆ ಸಿಒಎ ವಿವರಣೆ ಕೇಳಿದ್ದು, ಭೂತಾನ್ ಪ್ರವಾಸವನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ ಎಂದು ಕೇಳಿದೆ. ಈ ಹಿಂದೆ ಭೂತಾನ್ ಪ್ರವಾಸದ ಬಗ್ಗೆ ಪ್ರಸ್ತಾವನೆ ಬಂದಿರುವುದು ದಾಖಲಾಗಿಲ್ಲ. ಆಹ್ವಾನ ಬಂದಿರುವ ಬಗ್ಗೆಯೂ ದಾಖಲೆಗಳಿಲ್ಲ ಏಕೆ ಎಂದು ಕೇಳಿದೆ. ಎರಡನೆಯದ್ದಾಗಿ ಪ್ರವಾಸಕ್ಕೂ ಮುನ್ನ ಏಕೆ ಸಿಒಎ ಅನುಮತಿಯನ್ನು ಏಕೆ ಪಡೆಯಲಿಲ್ಲ ಎಂದು ಕೇಳಿದೆ. 
ಬಿಸಿಸಿಐ ನ ಹಂಗಾಮಿ ಕಾರ್ಯದರ್ಶಿ ಚೌಧರಿ ಅವರು ಪದೇ ಪದೇ ವಿದೇಶ ಪ್ರವಾಸ ಕೈಗೊಳ್ಳುತ್ತಿರುವುದನ್ನೂ ಸಿಒಎ ತನ್ನ ನೊಟೀಸ್ ನಲ್ಲಿ ಪ್ರಶ್ನಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com