ಹೌದು ಜಡೇಜಾ ತಮ್ಮ ಮೊದಲ ಎಸೆತದಲ್ಲೇ ವಿರಾಟ್ ಕೊಹ್ಲಿಯನ್ನು ಬೌಲ್ಡ್ ಮಾಡಿದ್ದರು. ಸಾಮಾನ್ಯವಾಗಿ ಒಂದು ವಿಕೆಟ್ ಪಡೆದ ಕೂಡಲೇ ಬೌಲರ್ ಸಂಭ್ರಮಿಸುವುದು ಸಾಮಾನ್ಯ. ಅಂತಹದರಲ್ಲಿ ವಿರಾಟ್ ಕೊಹ್ಲಿಯಂತ ಅತ್ಯುತ್ತಮ ಬ್ಯಾಟ್ಸ್ ಮನ್ ನನ್ನು ಔಟ್ ಮಾಡಿದಾಗ ಅದರ ಸಂಭ್ರಮಾಚರಣೆ ಅಧಿಕವಾಗಿರಬೇಕಿತ್ತು. ಆದರೆ ಇಲ್ಲಿ ಹಾಗಾಗಲಿಲ್ಲ. ಬದಲಿಗೆ ಬೌಲ್ಡ್ ಆಗುತ್ತಿದ್ದಂತೆ ಕೊಹ್ಲಿ ಜಡೇಜಾರನ್ನು ಗುರಾಯಿಸುವಂತೆ ನೋಡಿದ್ದಾರೆ.