ಐಪಿಎಲ್ 2018: ಹೈದರಾಬಾದ್ ವಿರುದ್ಧ ಮುಗ್ಗರಿಸಿದ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದೇನು?

ಮಾಡು ಇಲ್ಲವೇ ಮಡಿ ಎಂಬಂತ್ತಿದ್ದ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ತಂಡ ಮುಗ್ಗರಿಸಿದ್ದು, ಕೊಹ್ಲಿ ಪಡೆಯ ಪ್ಲೇ ಆಫ್ ಕನಸು ಭಗ್ನಗೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಹೈದರಾಬಾದ್: ಮಾಡು ಇಲ್ಲವೇ ಮಡಿ ಎಂಬಂತ್ತಿದ್ದ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ತಂಡ ಮುಗ್ಗರಿಸಿದ್ದು, ಕೊಹ್ಲಿ ಪಡೆಯ ಪ್ಲೇ ಆಫ್ ಕನಸು ಭಗ್ನಗೊಂಡಿದೆ.
ಆ ಮೂಲಕ ಇಷ್ಟು ದಿನ ಈ ಸಲ ಕಪ್ ನಮ್ದೇ ಎಂದು ಕೂಗುತ್ತಿದ್ದ ಅಭಿಮಾನಿಗಳ ಆಸೆಗೂ ಬೆಂಗಳೂರು ತಂಡದ ಆಟಗಾರರು ನೀರೆರಚಿದ್ದು. ತಂಡದ ಕಳಪೆ ಆಟವೇ ಸೋಲಿಗೆ ಕಾರಣ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಕೊಹ್ಲಿ, 'ಕೈಯಲ್ಲಿದ್ದ ಗೆಲುವನ್ನು ನಾವೇ ಹಾಳು ಮಾಡಿಕೊಂಡೆವು. ನಿಜಕ್ಕೂ ಈ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಿಜ ಹೇಳಬೇಕು ಎಂದರೆ ಎದುರಾಳಿ ತಂಡ ಗೆಲುವಿಗೆ ಅರ್ಹವಾಗಿತ್ತು. ಮೊದಲ ಆರು ಓವರ್ ಗಳನ್ನು ನಾವು ಉತ್ತಮವಾಗಿ ಎದುರಿಸಿದೆವು. ಆದರೆ ಆ ಬಳಿಕ ಪರಿಸ್ಥಿತಿಯೇ ಬದಲಾಗಿತ್ತು. ನಮ್ಮ ತಂಡದ ಬ್ಯಾಟ್ಸಮನ್ ಗಳ ಶಾಟ್ ಸೆಲೆಕ್ಷನ್ ಕೂಡ ಪ್ರಶ್ನಾರ್ಥವಾಗಿತ್ತು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅಂತಹ ಹೊಡೆತಗಳ ಅವಶ್ಯಕತೆ ಇರಲಿಲ್ಲ ಎಂದು ಹೇಳಿದ್ದಾರೆ.
ಅಂತೆಯೇ ನಾವೇ ಎದುರಾಳಿ ತಂಡ ಪುಟಿದೇಳಲು ನಾವೇ ಅವಕಾಶ ಮಾಡಿಕೊಟ್ಟೆವು. ತಂಡದ ಫೀಲ್ಡಿಂಗ್ ಉತ್ತಮವಾಗಿತ್ತಾದರೂ ಇನ್ನೂ 10-15ರನ್ ಗಳನ್ನುನಾವು ಕಡಿತ ಮಾಡಬಹುದಿತ್ತು. ಬ್ಯಾಟಿಂಗ್ ಪಿಚ್ ಉತ್ತಮವಾಗಿರಲಿಲ್ಲ. ಆದರೆ ನಾವು ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ತೋರಬಹುದಿತ್ತು. ಸೋಲಲು ನಾವು ಅರ್ಹರಾಗಿದ್ದೆವು ಎಂದು ಕೊಹ್ಲಿ ತಮ್ಮ ತಂಡದ ವಿರುದ್ಧ ಅಸಹನೆ ವ್ಯಕ್ತಪಡಿಸಿದ್ದಾರೆ.
ಅಂತೆಯೇ ಹೈದರಾಬಾದ್ ತಂಡದ ಪ್ರದರ್ಶನವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಕೊಹ್ಲಿ, ಅಂತಿಮ ಓವರ್ ನಲ್ಲಿ ಗೆಲುವು ಕಸಿದ ಹೈದರಾಬಾದ್ ತಂಡದ ಬೌಲರ್ ಗಳಿಗೆ ಗೆಲುವಿನ ಶ್ರೇಯ ಸಲ್ಲಬೇಕು ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com