'ಭಾರತ ಬಿಟ್ಟು ತೊಲಗಿ' ಹೇಳಿಕೆ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಸಿಒಎ ಕೆಂಗಣ್ಣು?

ವ್ಯಕ್ತಿಯೊಬ್ಬರನ್ನು ಇಷ್ಟವಾಗದಿದ್ದರೆ ಭಾರತ ಬಿಟ್ಟು ತೊಲಗಿ ಎಂದು ಹೇಳಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಿಒಎ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ವ್ಯಕ್ತಿಯೊಬ್ಬರನ್ನು ಇಷ್ಟವಾಗದಿದ್ದರೆ ಭಾರತ ಬಿಟ್ಟು ತೊಲಗಿ ಎಂದು ಹೇಳಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಿಒಎ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬ್ಯಾಟಿಂಗ್ ಟೀಕಿಸಿ ವಿದೇಶಿ ಬ್ಯಾಟ್ಸಮನ್ ಗಳ ಶ್ಲಾಘನೆ ಮಾಡಿದ್ದ ವ್ಯಕ್ತಿಯನ್ನು ಟೀಕಿಸಿದ್ದ ವಿರಾಟ್ ಕೊಹ್ಲಿ, ಅವರನ್ನು ಭಾರತ ಬಿಟ್ಟು ತೊಲಗಿ ಎನ್ನುವ ದಾಟಿಯಲ್ಲಿ ತಿರುಗೇಟು ನೀಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಲ್ಲದೇ, ಟೀಕೆಗೂ ಗುರಿಯಾಗಿತ್ತು. 
ಇದೀಗ ಈ ವಿಡಿಯೋ ಕುರಿತಂತೆ ಗಮನ ಹರಿಸಿರುವ ಸಿಒಎ (ಬಿಸಿಸಿಐಗೆ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಆಡಳಿತ ಮಂಡಳಿ) ವಿಚಾರಣೆಗೆ ಮುಂದಾಗಿದೆ. ಒಂದು ವೇಳೆ ಕೊಹ್ಲಿ ಸಮರ್ಥನೆ ನೀಡುವಲ್ಲಿ ವಿಫಲರಾದರೆ ಅವರಿಗೆ ವಾಗ್ದಂಡನೆ ನೀಡುವ ಸಾಧ್ಯತೆ ಇದೆ.
ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಸುಮ್ಮನೆ ಹೆಚ್ಚಿನ ಪ್ರಚಾರ ಸಿಗುತ್ತಿದೆ. ಆದರೆ ಬ್ಯಾಟಿಂಗ್‌ನಲ್ಲಿ ಅಂತಹಾ ವಿಶೇಷತೆ ಏನೂ ಇರಲ್ಲ. ಇಂಗ್ಲೀಷ್ ಅಥವಾ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳ ಪ್ರದರ್ಶನ ನನಗೆ ಹೆಚ್ಚು ಖುಷಿ ನೀಡುತ್ತೆ ಎಂದು ಆಪ್ ನಲ್ಲಿ ವ್ಯಕ್ತಿಯೋರ್ವರು ಕಾಮೆಂಟ್ ಮಾಡಿದ್ದರು. 
ಇದಕ್ಕೆ ಪ್ರತಿಕ್ರಿಸಿಯಿದ ಕೊಹ್ಲಿ, ಹಾಗಾದರೆ ನೀವು ಭಾರತ ಬಿಟ್ಟು ಇತರ ದೇಶ ಹುಡುಕಿಕೊಳ್ಳುವುದು ಒಳ್ಳೆಯದು. ಭಾರತದಲ್ಲಿದ್ದುಕೊಂಡು, ಬೇರೆ ದೇಶವನ್ನ ಇಷ್ಟಪಡುವುದಾದರೆ ಭಾರತದಲ್ಲಿರುವುದೇಕೆ? ನೀವು ನನ್ನನ್ನ ಇಷ್ಟಪಡುವುದಿಲ್ಲ ಎಂದು ನನಗೆ ಸಮಸ್ಯೆ ಇಲ್ಲ. ಆದರೆ ನೀವು ಭಾರತದಲ್ಲಿರಲು ಸೂಕ್ತ ಎಂದು ನನಗನಿಸುವುದಿಲ್ಲ ಎಂದಿದ್ದರು. ಕೊಹ್ಲಿ ಪ್ರತಿಕ್ರಿಯೆಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಕೊಹ್ಲಿ ಭಾರತವನ್ನು ಅಷ್ಟು ಇಷ್ಟಪಡುವುದಾದರೆ ವಿದೇಶದಲ್ಲೇಕೆ ಮದುವೆಯಾದರು ಎಂದು ಟ್ವಿಟಿಗರು ಪ್ರಶ್ನಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com