ಗಯಾನ: ಐಸಿಸಿ ಮಹಿಳಾ ಟಿ20 ವಿಶ್ವಕಪ್ ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ವನಿತೆಯರು ಬ್ಯಾಟಿಂಗ್‌ಗೂ ಮುನ್ನ 10 ರನ್ ಗಳಿಸಿದ್ದರು.
ಟೀಂ ಇಂಡಿಯಾ ವನಿತೆಯರು ಇನ್ನಿಂಗ್ಸ್ ಆರಂಭಿಸಿದ್ದೆ 10-0 ಸ್ಕೋರ್ ಕಾರ್ಡ್ ಜತೆಗೆ. ಈ ಅಮೂಲ್ಯ 10 ರನ್ ಗಳು ಟೀಂ ಇಂಡಿಯಾಗೆ ಬೋನಸ್ ಆಗಿ ಸಿಕ್ಕಿದ್ದು ಪಾಕಿಸ್ತಾನ ಆಟಗಾರ್ತಿಯರ ಅಶಿಸ್ತಿನ ಆಟದಿಂದಾಗಿ.
ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಪಾಕಿಸ್ತಾನದ ವನಿತೆಯರು ರನ್ ಕದಿಯುವ ಭರದಲ್ಲಿ ಅಪಾಯಕಾರಿಯಾಗಿ ಓಡಿದ್ದರು. ಈ ಬಗ್ಗೆ ಎಚ್ಚರಿಕೆ ನೀಡಿದ್ದರೂ ಮತ್ತೆರಡು ಬಾರಿ ಅಶಿಸ್ತಿನ ವರ್ತನೆ ಕಂಡು ಬಂದಿತು. ಇದಕ್ಕಾಗಿ ಪ್ರತಿ ತಪ್ಪಿಗೆ 5 ರನ್ ಗಳಂತೆ ಒಟ್ಟು 10 ರನ್ ಗಳನ್ನು ಭಾರತಕ್ಕೆ ಬೋನಸ್ ಆಗಿ ನೀಡಲಾಯಿತು.
ಇನ್ನು ಅಶಿಸ್ತಿನಿಂದ ಓಡಿದ್ದಕ್ಕೆ ಪಾಕಿಸ್ತಾನದ ಆಟಗಾರ್ತಿಯರು ಹೆಚ್ಚುವರಿಯಾಗಿ ಓಡಿದ 2 ರನ್ ಗಳು ಸಿಗಲಿಲ್ಲ. ಒಟ್ಟಾರೆ ಈ 12 ರನ್ ಗಳು ಭಾರತದ ಗೆಲುವಿಗೆ ನೆರವಾದವು.