ಪೃಥ್ವಿ, ಕೊಹ್ಲಿ, ಜಡೇಜಾ ಭರ್ಜರಿ ಶತಕ, 649/9 ಬೃಹತ್ ಮೊತ್ತ ಪೇರಿಸಿ ಟೀಂ ಇಂಡಿಯಾ ಇನ್ನಿಂಗ್ಸ್ ಡಿಕ್ಲೇರ್

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 9 ವಿಕೆಟ್ ನಷ್ಟಕ್ಕೆ ಬೃಹತ್ ಮೊತ್ತ 649 ರನ್ ಗಳನ್ನು ಪೇರಿಸಿ ಡಿಕ್ಲೇರ್ ಮಾಡಿಕೊಂಡಿತು...
ಟೀಂ ಇಂಡಿಯಾ
ಟೀಂ ಇಂಡಿಯಾ
Updated on: 
ರಾಜಕೋಟ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 9 ವಿಕೆಟ್ ನಷ್ಟಕ್ಕೆ ಬೃಹತ್ ಮೊತ್ತ 649 ರನ್ ಗಳನ್ನು ಪೇರಿಸಿ ಡಿಕ್ಲೇರ್ ಮಾಡಿಕೊಂಡಿತು.
ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಪೃಥ್ವಿ ಶಾ 134, ವಿರಾಟ್ ಕೊಹ್ಲಿ 139 ಹಾಗೂ ರವೀಂದ್ರ ಜಡೇಜಾ ಅಜೇಯ 100 ರನ್ ಭರ್ಜರಿ ಶತಕ ಸಿಡಿಸಿದ್ದು ಪರಿಣಾಮ ಟೀಂ ಇಂಡಿಯಾ 600 ರನ್ ಗಳ ಗಡಿ ದಾಟಿತು.
ಟೀಂ ಇಂಡಿಯಾ ಪರ ಚೇತೇಶ್ವರ ಪೂಜಾರ 86, ಅಜಿಂಕ್ಯ ರಹಾನೆ 41, ರಿಷಬ್ ಪಂತ್ 92 ಮತ್ತು ಉಮೇಶ್ ಯಾದವ್ 22 ರನ್ ಗಳಿಸಿದ್ದಾರೆ. 
ವೆಸ್ಟ್ ಪರ ಬೌಲಿಂಗ್ ನಲ್ಲಿ ಬಿಶೂ 4, ಲೆವಿಸ್ 2 ಹಾಗೂ ಗ್ಯಾಬ್ರಿಲ್, ಚೇಸ್ ಮತ್ತು ಬ್ರಾಥ್ವೈಟ್ ತಲಾ 1 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com