ಹಾಸ್ಯಾತ್ಮಕ ರನೌಟ್: ಜಡೇಜಾ ಸ್ವಲ್ಪ ಯಾಮಾರಿದ್ರು ಚಳ್ಳೆಹಣ್ಣು ಗ್ಯಾರಂಟಿ! ವಿಡಿಯೋ ವೈರಲ್

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ರವೀಂದ್ರ ಜಡೇಜಾ ಟಿಪಿಕಲ್ ರನೌಟ್ ಮಾಡಿದ್ದಾರೆ...
ರವೀಂದ್ರ ಜಡೇಜಾ
ರವೀಂದ್ರ ಜಡೇಜಾ
Updated on: 
ರಾಜಕೋಟ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ರವೀಂದ್ರ ಜಡೇಜಾ ಟಿಪಿಕಲ್ ರನೌಟ್ ಮಾಡಿದ್ದಾರೆ. 
ಜಡೇಜಾ ಸ್ವಲ್ಪ ಯಾಮಾರಿದ್ರೂ ವೆಸ್ಟ್ ಇಂಡೀಸ್ ತಂಡದ ಬ್ಯಾಟ್ಸ್‌ಮನ್ ಶಿಮ್ರೊನ್ ಹೆಟ್ಮರ್ ಚಳ್ಳೆ ಹಣ್ಣು ತಿನ್ನಿಸುತ್ತಿದ್ದರು. ಹೌದು ರವಿಚಂದ್ರನ್ ಅಶ್ವಿನ್ ಬೌಲಿಂಗ್ ನಲ್ಲಿ ಹೆಟ್ಮರ್ ಎಡಬದಿಗೆ ಚೆಂಡನ್ನು ಬಾರಿಸಿ ಒಂದು ರನ್ ಪಡೆಯಲು ಮುಂದಾದರು. ನಾನ್ ಸ್ಟ್ರೈಕ್ ನಲ್ಲಿದ್ದ ಆ್ಯಂಬ್ರಿಸ್ ರನ್ ಗಾಗಿ ಓಡುತ್ತಿದ್ದರು. ಅಷ್ಟರಲ್ಲಿ ಚೆಂಡು ನೇರವಾಗಿ ಜಡೇಜಾರ ಕೈಸೇರಿತ್ತು. ಆಗ ನಾನ್ ಸ್ಟ್ರೈಕ್ ಹಾಗೂ ಸ್ಟ್ರೈಕ್ ಬ್ಯಾಟ್ಸ್ ಮನ್ ಗಳು ಕೀಪರ್ ಬದಿಗೆ ಓಡಿ ಕ್ರೀಸ್ ಮುಟ್ಟಿದ್ದರು.
ಅಲ್ಲಿಗೆ ಒಂದು ವಿಕೆಟ್ ಬೀಳುವುದು ಕಾಯಂ ಆಗಿತ್ತು. ಆದರೆ ರವೀಂದ್ರ ಜಡೇಜಾ ಕೈಯಲ್ಲಿದ್ದ ಚೆಂಡನ್ನು ಬೌಲರ್ ಗೆ ಎಸೆಯದೆ ತಾವೇ ಓಡಿ ಬರುತ್ತಿದ್ದರು. ಇದನ್ನು ಗಮನಿಸಿದ ಹೆಟ್ಮರ್ ಓಡಿ ಬಂದು ಕ್ರಿಸ್ ಮುಟ್ಟಬೇಕಿತ್ತು. ಅಷ್ಟರಲ್ಲಿ ಎಚ್ಚೇತ ಜಡೇಜಾ ಐದು ಹೆಜ್ಜೆ ದೂರದಿಂದಲೇ ವಿಕೆಟ್ ಗೆ ಚೆಂಡು ಎಸೆದರು. ಒಂದು ವೇಳೆ ಚೆಂಡು ವಿಕೆಟ್ ಗೆ ತಾಗದೆ ಹೋಗಿದ್ದರೇ ಸುಲಭವಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗುತ್ತಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com