ಹೌದು.. ಬುಮ್ರಾ ತಮ್ಮ ತದ್ರೂಪು ವ್ಯಕ್ತಿಯ ಕುರಿತು ಟ್ವೀಟ್ ಮಾಡಿಲ್ಲ. ಆದರೆ ತಮ್ಮದೇ ಬೌಲಿಂಗ್ ಶೈಲಿಯನ್ನು ಯಥಾವತ್ತಾಗಿ ಅನುಕರಿಸುವ 5 ವರ್ಷದ ಬಾಲಕ ವಿಡಿಯೋ ನೋಡಿ ಪುಳಕಗೊಂಡಿದ್ದಾರೆ. ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರ ಜನ್ಮದಿನದ ಅಂಗವಾಗಿ ಟ್ವೀಟ್ ಮಾಡಿರುವ ಬುಮ್ರಾ, ನಾವು ಸಾಕಷ್ಟು ಬಾರಿ ನಿಮ್ಮಂತಹ ಲೆಜೆಂಡ್ ಆಟಗಾರರ ಆಟದ ಶೈಲಿಯನ್ನು ಅನುಕರಿಸುತ್ತೇವೆ. ಆದರೆ ನಮ್ಮದೇ ಶೈಲಿಯನ್ನು ಮತ್ತಿನ್ಯಾರೋ ಅನುಕರಿಸಿದಾಗ ಅದರ ಖುಷಿಯೇ ಬೇರೆ.. ನೋಡಲು ಸಂತೋಷವಾಗುತ್ತದೆ ಎಂದು ಬುಮ್ರಾ ಹೇಳಿದ್ದಾರೆ.