ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್, ಕ್ಯಾಲೆಂಡರ್ ಇಯರ್ನಲ್ಲಿ ಸಾವಿರ ರನ್ಗಳ ಸರದಾರನಾಗಿದ್ದು, ಸೆಂಚುರಿಗಳ ಮೇಲೆ ಸೆಂಚುರಿ ಬಾರಿಸಿ ಇದ್ದಬಿದ್ದ ಎಲ್ಲ ದಾಖಲೆಗಳನ್ನ ಪುಡಿಗಟ್ಟಿ ಗೆಲುವಿನ ರಣಕೇಕೆ ಹಾಕುತ್ತಿದ್ದಾರೆ. ಆದರೆ ಅತ್ತ ರೋಹಿತ್ ಶರ್ಮಾ, ತಣ್ಣನೇ ತಮ್ಮ ವೈಯಕ್ತಿಕ ದಾಖಲೆಯನ್ನ ಆರು ವರ್ಷಗಳಿಂದ ಯಾರಿಗೂ ಬಿಟ್ಟು ಕೊಡದೇ ಕಾಯ್ದುಕೊಂಡು ಬಂದಿದ್ದಾರೆ. ಅದು ವಿರಾಟ್ ಜತೆಗೆ ಈ ಪಂದ್ಯವೊಂದರಲ್ಲಿ ಭಾರತದ ಪರ ವೈಯಕ್ತಿಕ ಟಾಪ್ ಸ್ಕೋರರ್ ಸ್ಪರ್ಧೆಯಲ್ಲಿ ಕೊಹ್ಲಿ ಹಿಮ್ಮೆಟ್ಟಿಸಿ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದಾರೆ.