ಶೂನ್ಯಕ್ಕೆ ಔಟಾಗಿ ಅಪರೂಪದ ದಾಖಲೆ ಬರೆದ ರಿಷಬ್ ಪಂತ್!

ಟೀಂ ಇಂಡಿಯಾ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಗರಡಿಯಲ್ಲಿ ಪಳಗಿರುವ ರಿಷಬ್ ಪಂತ್ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅಪರೂಪದ ದಾಖಲೆಯನ್ನು ಮಾಡಿದ್ದಾರೆ...
ರಿಷಬ್ ಪಂತ್
ರಿಷಬ್ ಪಂತ್
Updated on: 
ಸೌಥಾಂಪ್ಟನ್: ಟೀಂ ಇಂಡಿಯಾ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಗರಡಿಯಲ್ಲಿ ಪಳಗಿರುವ ರಿಷಬ್ ಪಂತ್ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅಪರೂಪದ ದಾಖಲೆಯನ್ನು ಮಾಡಿದ್ದಾರೆ. 
ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಕಣಕ್ಕಿಳಿದಿದ್ದ ರಿಷಬ್ ಪಂತ್ ಬರೋಬ್ಬರಿ 29 ಎಸೆತಗಳನ್ನು ಎದುರಿಸಿದ್ದು ಯಾವುದೇ ರನ್ ಗಳಿಕೆ ಮಾಡದೇ ಔಟಾಗಿದ್ದಾರೆ. 
ಈ ಹಿಂದೆ ಕೂಡ 2005ರಲ್ಲಿ ಟೀಂ ಇಂಡಿಯಾದ ಇರ್ಫಾನ್ ಪಠಾಣ್ 29 ಎಸೆತ ಎದುರಿಸಿ ಶೂನ್ಯಕ್ಕೆ ಔಟಾಗಿದ್ದರು. ಇನ್ನು 2011ರಲ್ಲಿ ಸುರೇಶ್ ರೈನಾ ಸಹ 29 ಎಸೆತಗಳಲ್ಲಿ ರನ್ ಗಳಿಕೆ ಮಾಡದೇ ವಿಕೆಟ್ ಒಪ್ಪಿಸಿದ್ದರು. 
ಇನ್ನು ವಿಕೆಟ್ ಕೀಪರ್ ಗಳಾಗಿ ಜೋಸ್ ಬಟ್ಲರ್ ಹಾಗೂ ಡೇವಿಡ್ ವಿಲಿಯಮ್ಸ್ ಹೊರತುಪಡಿಸಿ ರಿಷಬ್ ಪಂತ್ ಅತಿ ಹೆಚ್ಚು ಬಾಲ್ ಎದುರಿಸಿ ರನ್ ಗಳಿಕೆ ಮಾಡದೇ ಔಟಾದ ಬ್ಯಾಟ್ಸ್ ಮನ್ ಆಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com