ಸೀರೆ ಉಟ್ಟು, ಬಿಂದಿ ಧರಿಸಿದ ಕ್ರಿಕೆಟಿಗ ಗೌತಮ್ ಗಂಭೀರ್, ಕಾರಣ ಏನು?

ಕ್ರಿಕೆಟಿಗ ಗೌತಮ್ ಗಂಭೀರ್ ಸೀರೆ ಉಟ್ಟು, ಬಿಂದಿ ಧರಿಸಿ ಸುದ್ದಿಗೆ ಗ್ರಾಸವಾಗಿದ್ದಾರೆ. ಅದರೆ ಅವರ ಈ ಕಾರ್ಯದ ಹಿಂದೆ ಒಂದು ಉದಾತ್ತ ಧ್ಯೇಯವಡಗಿದೆ.
ಸೀರೆ ಉಟ್ಟು, ಬಿಂದಿ ಧರಿಸಿದ ಕ್ರಿಕೆಟಿಗ ಗೌತಮ್ ಗಂಭೀರ್
ಸೀರೆ ಉಟ್ಟು, ಬಿಂದಿ ಧರಿಸಿದ ಕ್ರಿಕೆಟಿಗ ಗೌತಮ್ ಗಂಭೀರ್
Updated on: 
ನವದೆಹಲಿ: ಕ್ರಿಕೆಟಿಗ ಗೌತಮ್ ಗಂಭೀರ್ ಸೀರೆ ಉಟ್ಟು, ಬಿಂದಿ ಧರಿಸಿ ಸುದ್ದಿಗೆ ಗ್ರಾಸವಾಗಿದ್ದಾರೆ. ಅದರೆ ಅವರ ಈ ಕಾರ್ಯದ ಹಿಂದೆ ಒಂದು ಉದಾತ್ತ ಧ್ಯೇಯವಡಗಿದೆ.
ಹೌದು.. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗೆ  ಗೌತಮ್ ಗಂಭೀರ್ ಇತ್ತೀಚೆಗೆ ನಡೆದ ಏಳನೇ ವರ್ಷದ ತೃತೀಯ ಲಿಂಗಿಗಳ ಹಬ್ಬದಲ್ಲಿ ಭಾಗವಹಿಸಿದ್ದರು. ಅದರಲ್ಲೇನು ವಿಶೇಷ ಎಂದು ಹುಬ್ಬೇರಿಸಬೇಡಿ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಮಾತ್ರವಲ್ಲದೇ ಗಂಭೀರ್ ಸ್ವತಃ ಸೀರೆ ಉಟ್ಟು, ಹಣೆಗೆ ಬಿಂದಿ ಇಟ್ಟುಕೊಂಡು ತೃತೀಯ ಲಿಂಗಿಗಳ ರೀತಿಯಲ್ಲಿ ತಯಾರಾಗಿದ್ದರು.
ಇಲ್ಲಿನ ಮಾಲ್ ಒಂದರಲ್ಲಿ ನಡೆದ ಈ ತೃತೀಯಲಿಂಗಿಗಳ ಹಬ್ಬದಲ್ಲಿ ನೂರಾರು ಮಂದಿ ಪಾಲ್ಗೊಂಡು ಸಂಭ್ರಮಿಸಿದರು. ಎಚ್‍ಐವಿ/ಏಡ್ಸ್ ಅಲೈನ್ಸ್ ಇಂಡಿಯಾ ಇದನ್ನು ಆಯೋಜಿಸಿತ್ತು. ಈ ವರ್ಷದ ಧ್ಯೇಯವಾಕ್ಯ "ಬಾರ್ನ್ ದಿಸ್ ವೇ" ಎಂದಾಗಿತ್ತು.
ತೃತೀಯಲಿಂಗಿಗಳು ಒಂದೆಡೆ ಸೇರಿ, ಸಮುದಾಯದ ಸಬಲೀಕರಣ ಬಗ್ಗೆ ಚರ್ಚಿಸಿದರು. ಜತೆಗೆ ತಮ್ಮಲ್ಲಿರುವ ಪ್ರತಿಭೆಯನ್ನು ಬಳಸಿಕೊಂಡು ಆಯಾ ಕ್ಷೇತ್ರದಲ್ಲಿ ದೇಶಕ್ಕಾಗಿ ಕೊಡುಗೆ ನೀಡುವಂತೆ ಅರಿವು ಮೂಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಂಭೀರ್ ಸೀರೆ ಧರಿಸಿ ಗಮನಸೆಳೆದರು. ಆ ಮೂಲಕ ಗಂಭೀರ್ ಮಂಗಳಮುಖಿ ಸಮುದಾಯದ ಸದಸ್ಯರನ್ನು ಎಲ್ಲರಂತೆ ಗೌರವಿಸಬೇಕು ಎಂಬ ಸಂದೇಶ ಸಾರಿದರು. ಗೌತಮ್‌ ಗಂಭೀರ್‌ ಅವರ ಈ ಗಂಭೀರ ನಡೆಯಿಂದ ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಾಮಾಜಿಕವಾಗಿ ದೂರವಾಗಿದ್ದ ಸಮುದಾಯದ ಬೆಂಬಲವಾಗಿ ನಿಂತ ಗೌತಮ್‌ ಅವರ ದುಪ್ಪಟ ಮತ್ತು ಬಿಂದಿ ಧರಿಸಿದ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿವೆ.
ಸಲಿಂಗಕಾಮವನ್ನು ಅಪರಾಧವಲ್ಲ ಎಂದು ಪರಿಗಣಿಸಿ ಭಾರತೀಯ ದಂಡಸಂಹಿತೆಯ ಸೆಕ್ಷನ್ 377ರ ಬಗ್ಗೆ ಇತ್ತೀಚೆಗೆ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com