ಶೊಯೆಬ್ ಮಲ್ಲಿಕ್ ಮತ್ತು ಬಾಬರ್ ಅಜಂ ನಡುವಿನ 82 ರನ್ ಗಳ ಜೊತೆಯಾಟ ನಿಜಕ್ಕೂ ನಮಲ್ಲಿ ಒತ್ತಡ ಹೆಚ್ಚಾಗುವಂತೆ ಮಾಡಿತ್ತು. ಆರಂಭಿಕ ಆಘಾತದ ಹೊರತಾಗಿಯೂ ಪಾಕಿಸ್ತಾನ ಇವರಿಬ್ಬರ ಜೊತೆಯಾಟದಲ್ಲಿ ಚೇತರಿಸಿಕೊಂಡಿತ್ತು. ಆರಂಭಿಕ ಹತ್ತು ಓವರ್ ಗಳನ್ನು ಸಂಪೂರ್ಣ ನಮ್ಮ ಪರವಾಗಿತ್ತು. ಆದರೆ ಆ ಬಳಿಕ ಮಲ್ಲಿಕ್ ಹಾಗೂ ಬಾಬರ್ ಒತ್ತಡವನ್ನು ಉತ್ತಮವಾಗಿ ನಿಭಾಯಿಸಿದರು. ಆದರೂ ನಮ್ಮ ಬೌಲರ್ ಗಳು ದೃತಿಗೆಡದೇ ಉತ್ತಮವಾಗಿ ಬೌಲಿಂಗ್ ಮಾಡಿ ಈ ಜೋಡಿಯನ್ನು ಬೇರ್ಪಡಿಸಿತು. ಕೇದಾರ್ ಜಾದವ್ ತಮ್ಮ ಬೌಲಿಂಗ್ ಕುರಿತು ಗಂಭೀರವಾಗಿದ್ದು, ಅದನ್ನು ಉತ್ತಮ ಪಡಿಸಿಕೊಳ್ಳುವತ್ತ ಗಂಭೀರ ಚಿಂತನೆಯಲ್ಲಿದ್ದಾರೆ. ಅದಕ್ಕೆ ತಕ್ಕಂತೆ ಅಭ್ಯಾಸ ಕೂಡ ಮಾಡುತ್ತಿದ್ದಾರೆ. ಕಠಿಣ ಪರಿಸ್ಥಿತಿಯಲ್ಲಿ ಜಾದವ್ ವಿಕೆಟ್ ಪಡೆದಿದ್ದು, ತಂಡಕ್ಕೆ ನೆರವಾಯಿತು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.