ಆರಂಭಿಕ ಆಟಗಾರರಾದ ಶಿಖರ್ ಧವನ್ 1 ಸಿಕ್ಸರ್, 4 ಬೌಂಡರಿ ನೆರವಿನೊಂದಿಗೆ 40 ರನ್ ಗಳಿಸಿದ್ದರೆ ನಂತರ ಬಂದ ನಾಯಕ ರೋಹಿತ್ ಶರ್ಮಾ ರನ್ ಸುರಿಮಳೆಯನ್ನೇ ಸುರಿಸಿದ್ದಾರೆ.
5 ಬೌಂಡರಿ, 3 ಸಿಕ್ಸರ್ ಗಳೊಡನೆ ರೋಹಿತ್ 83 ರನ್ ಗಳಿಸಿ ಅಜೇಯರಾಗಿ ಉಳಿದರು.
ಇನ್ನು ಅಂಬಟಿ ರಾಯಡು 13 ರನ್ ಬಾರಿಸಿ ಪೆವಿಲಿಯನ್ ಗೆ ತೆರಳಿದರೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಹ ಬೌಲರ್ ಗಳ ದಿಕ್ಕುಗೆಡಿಸಿದ್ದರು.33ರನ್ ಪೇರಿಸಿದ ಧೋನಿ ಬ್ಯಾಟ್ ನಿಂದ 3 ಬೌಂಡರಿಗಳು ಸಿಡಿದಿದ್ದವು.