ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿ ರೋಚಕ ಘಟ್ಟಕ್ಕೆ ಬಂದು ತಲುಪುತ್ತಿದ್ದು ಬಲಿಷ್ಠ ತಂಡಗಳು ಸೆಣೆಸಾಡುತ್ತಿವೆ. ಟೂರ್ನಿಯಲ್ಲಿ ಕ್ರಿಕೆಟ್ ಶಿಶು ಆಫ್ಘಾನ್ ಮಾರಣಾಂತಿಕವಾಗಿ ಆಡುತ್ತಿದ್ದು ಇದು ಟೀಂ ಇಂಡಿಯಾಗೆ ಕಂಟಕವಾಗಿ ಪರಿಣಮಿಸಿದೆ.
ಇನ್ನು ಆಫ್ಘಾನಿಸ್ತಾನವನ್ನು ಅಲ್ಪವಾಗಿ ಕಾಣಬೇಡಿ. ಟೂರ್ನಿಯಲ್ಲಿ ಪಾಕಿಸ್ತಾನಕ್ಕಿಂತಲೂ ಆಫ್ಘಾನಿಸ್ತಾನ ತಂಡ ಹೆಚ್ಚು ಅಪಾಯಕಾರಿ ಎಂದು ಟೀಂ ಇಂಡಿಯಾ ಮಾಜಿ ನಾಯಕ, ಅಂಡರ್ 19 ತಂಡದ ಕೋಚ್ ಕನ್ನಡಿಗ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.
ಆಫ್ಘಾನಿಸ್ತಾನ ತಂಡ ಬಿ ಗುಂಪಿನ 2 ಪಂದ್ಯಗಳಲ್ಲಿ ಜಯ ಪಡೆದಿದೆ. ಟೀಂ ಇಂಡಿಯಾ ಕೇವಲ ಪಾಕ್ ಕುರಿತು ಮಾತ್ರ ಫೋಕಸ್ ಮಾಡಬಾರದು. ಟೂರ್ನಿಯಲ್ಲಿ ಆಫ್ಘಾನ್ ಪ್ರಬಲ ಸ್ಪರ್ಧೆ ನೀಡಲಿದೆ ಎಂದು ಟೀಂ ಇಂಡಿಯಾಗೆ ದ್ರಾವಿಡ್ ಎಚ್ಚರಿಕೆ ನೀಡಿದ್ದಾರೆ.
ಏಷ್ಯಾಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಭಾರತ ಆಡಿರುವ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇನ್ನು ಇಂದು ಪಾಕಿಸ್ತಾನ ವಿರುದ್ಧ ಪಂದ್ಯವನ್ನಾಡುತ್ತಿದೆ.