ಭಾರತೀಯ ಕ್ರೀಡಾಭಿಮಾನಿಗಳ ಮನಗೆದ್ದ ನಿಗೂಡ ಪಾಕ್ ಚೆಲುವೆ ಯಾರು ಗೊತ್ತ!

ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದ್ದು ಇದೇ ಪಂದ್ಯದಲ್ಲಿ ಪಾಕ್ ಸೋಲಿನ ನಡುವೆ ಪಾಕ್ ಬೆಡಗಿಯೊಬ್ಬಳು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದಳು...
ನಿವ್ಯ ನವೋರಾ
ನಿವ್ಯ ನವೋರಾ
Updated on
ದುಬೈ: ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದ್ದು ಇದೇ ಪಂದ್ಯದಲ್ಲಿ ಪಾಕ್ ಸೋಲಿನ ನಡುವೆ ಪಾಕ್ ಬೆಡಗಿಯೊಬ್ಬಳು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದಳು. 
ಪಾಕ್ ಮತ್ತು ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಪಾಕ್ ಸೋಲು ಖಚಿತವಾಗುತ್ತಿದಂತೆ ಕ್ಯಾಮೆರಾಮನ್ ಪ್ರೇಕ್ಷಕರ ಸಂಭ್ರಮಾಚರಣೆ ಸೆರೆಹಿಡಿಯಲು ಮುಂದಾಗಿದ್ದು ಈ ವೇಳೆ ನಿಗೂಡ ಪಾಕ್ ಯುವತಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದಳು. ಈ ಯುವತಿ ಯಾರೆಂದು ತಿಳಿದುಬಂದಿದೆ. 
ಈ ಪಾಕ್ ಯುವತಿಯ ಸೌಂದರ್ಯಕ್ಕೆ ಮಾರುಹೋದ ಭಾರತೀಯ ಕ್ರೀಡಾಭಿಮಾನಿಗಳು ಆಕೆಯ ಸೌಂದರ್ಯವನ್ನು ಗುಣಗಾನ ಮಾಡಿದ್ದರು. ಈ ನಿಗೂಡ ಯುವತಿಯ ಹೆಸರು ನಿವ್ಯ ನವೋರಾ ಎಂಬುದು ಇದೀಗ ತಿಳಿದುಬಂದಿದೆ. 
ಟೀಂ ಇಂಡಿಯಾ ವಿರುದ್ಧ ಪಾಕ್ ಸೋಲು ಖಚಿತವಾಗಿದ್ದರೂ ತಂಡದ ಜರ್ಸಿ ತೊಟ್ಟಿದ್ದ ಯುವತಿ ಮಾತ್ರ ಆಟಗಾರರಿಗೆ ಬೆಂಬಲವಾಗಿ ನಿಂತಿದ್ದಳು. ಕೆಲವೇ ಸೆಕೆಂಡ್ ಗಳು ಮಾತ್ರ ನಿವ್ಯ ನವೋರಾ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡರೂ ಭಾರತೀಯ ಅಭಿಮಾನಿಗಳ ಮನಗೆದ್ದಿದ್ದಳು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com