ಎಂಎಸ್ ಧೋನಿ ಇಂದಿನ ಪಂದ್ಯ ಗೆಲ್ಲಿಸಿದ್ರೆ 100ನೇ ಐಪಿಎಲ್ ಗೆದ್ದ ಏಕೈಕ ನಾಯಕ?

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಮೂರು ಬಾರಿಗೆ ತಂಡವನ್ನು ಚಾಂಪಿಯನ್ ಆಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಇದೀಗ ಇಂದಿನ ಪಂದ್ಯವನ್ನು ಗೆಲ್ಲಿಸುವ...
ಎಂಎಸ್ ಧೋನಿ
ಎಂಎಸ್ ಧೋನಿ
Updated on: 
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಮೂರು ಬಾರಿಗೆ ತಂಡವನ್ನು ಚಾಂಪಿಯನ್ ಆಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಇದೀಗ ಇಂದಿನ ಪಂದ್ಯವನ್ನು ಗೆಲ್ಲಿಸುವ ಮೂಲಕ ಐಪಿಎಲ್ ನಲ್ಲಿ 100ನೇ ಪಂದ್ಯ ಗೆಲ್ಲಿಸಿದ ನಾಯಕ ಎಂಬ ದಾಖಲೆ ಬರೆಯುತ್ತಾರಾ ಎಂದು ಕಾದು ನೋಡಬೇಕಿದೆ. 
ಅಲ್ಲದೆ ಇಂದಿನ ಪಂದ್ಯದಲ್ಲಿ ಹಲವು ದಾಖಲೆಗಳು ಸೃಷ್ಟಿಯಾಗುವ ಸಾಧ್ಯತೆಗಳು ಇವೆ. ಅವುಗಳಲ್ಲಿ ಕೆಲವೊಂದು ದಾಖಲೆಗಳು ಇಲ್ಲಿವೆ. 
ಐಪಿಎಲ್ ನಲ್ಲಿ ಎಡಗೈ ಸ್ಪಿನ್ ಬೌಲರ್ ಯಾರೂ 100 ವಿಕೆಟ್ ಪಡೆದ ಸಾಧನೆ ಮಾಡಿಲ್ಲ. ಇಂದಿನ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರವೀಂದ್ರ ಜಡೇಜಾ 2 ವಿಕೆಟ್ ಪಡೆದರೆ 100 ವಿಕೆಟ್ ಪಡೆದ ಸಾಧನೆ ಮಾಡುತ್ತಾರೆ. 
ಚೆನ್ನೈ ತಂಡದ ಆರಂಭಿಕ ಆಟಗಾರ ಶೇನ್ ವಾಟ್ಸನ್ ಸದ್ಯ 969 ರನ್ ಪೇರಿಸಿದ್ದು ಇನ್ನು 31 ರನ್ ಪೇರಿಸಿದರೆ 1000 ರನ್ ಬಾರಿಸಿದ ಆಟಗಾರನಾಗಿ ಹೊರಹೊಮ್ಮುತ್ತಾರೆ.
ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು 21 ಬಾರಿ ಮುಖಾಮುಖಿಯಾಗಿದ್ದು ಇದರಲ್ಲಿ 13 ಪಂದ್ಯಗಳನ್ನು ಚೆನ್ನೈ ಗೆದ್ದು ಬೀಗಿದ್ದು ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com