ವೆಸ್ಟ್ ಇಂಡೀಸ್ ತಂಡದ ಆರಂಭಿಕರಾಗಿದ್ದ ಜಾನ್ ಕ್ಯಾಂಪ್‌ಬೆಲ್ ಹಾಗೂ ಎವಿನ್ ಲೆವಿಸ್ ಶೂನ್ಯ ಸಂಪಾದಿಸಿದ್ದರೆ ನಿಕೋಲಸ್ ಪೂರನ್ (20) ಶಿಮ್ರಾನ್ ಹೆಟ್ಮಾಯೆರ್ (0) ಔಟಾದರೆ ತಂಡದ ಹಿರಿಯ ಅನುಭವಿ ಆಟಗಾರ ಕೀರಾನ್ ಪೊಲಾರ್ಡ್ 49 ಬಾಲ್ ಗಳಿಗೆ ನಾಲ್ಕು ಸಿಕ್ಸರ್ ಗಳ ಸಹಾಯದಿಂದ 49 ರನ್ ಗಳಿಸಿದ್ದರು.
ಆದರೆ ತಂಡದ ನಾಯಕ ಬ್ರಾತ್‌ವೇಟ್ ಕೂಡ ಹೆಚ್ಚು ಸಮಯ ಕ್ರೀಸ್ ನಲ್ಲಿ ನಿಲ್ಲದೆ ಹಿಂತಿರುಗಿದ್ದು ತಂಡಕ್ಕೆ ತೀವ್ರ ಹಿನ್ನಡೆಯಾಗಿತ್ತು.ಇನ್ನು ಸುನಿಲ್ ನರೈನ್ (2) ಹಾಗೂ ಕೀಮೊ ಪೌಲ್ (3)ರನ್ ಗಳಿಸಿದ್ದರು.
ಟೀಂ ಇಂಡ್ಯಾ ಪರವಾಗಿ ನವದೀಪ್ ಸೈನಿ 3, ಭುವನೇಶ್ವರ್ ಕುಮಾರ್ 2, ವಾಷಿಂಗ್ಟನ್ ಸುಂದರ್, ಖಲೀಲ್ ಅಹ್ಮದ್, ಕೃುಣಾಲ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.