ಸಿಕ್ಸ್ ಬಾರಿಸಿ ಕೊಹ್ಲಿ 'ನೋಟ್‌ಬುಕ್‌ನಲ್ಲಿ' ಬರೆದು ಬೌಲರ್‌ಗೆ ಎಚ್ಚರಿಕೆ ಕೊಟ್ಟಿದ್ದೇನು? ವಿಡಿಯೋ ವೈರಲ್!

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಮ್ಮನ್ನು ಹೀಯಾಳಿಸಿದವರನ್ನು ಅಷ್ಟು ಸುಲಭಕ್ಕೆ ಮರೆಯುವುದಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ. ಹೌದು ಹಳೆಯ ಪಂದ್ಯವೊಂದರಲ್ಲಿ ವಿಂಡೀಸ್ ಬೌಲರ್ ಕೊಹ್ಲಿ ವಿಕೆಟ್ ಪಡೆದು ಹೀಯಾಳಿಸಿದ್ದಕ್ಕೆ... 
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on: 

ಹೈದರಾಬಾದ್: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಮ್ಮನ್ನು ಹೀಯಾಳಿಸಿದವರನ್ನು ಅಷ್ಟು ಸುಲಭಕ್ಕೆ ಮರೆಯುವುದಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ. ಹೌದು ಎರಡು ವರ್ಷಗಳ ಹಿಂದೆ ವಿಂಡೀಸ್ ಬೌಲರ್ ಕೊಹ್ಲಿ ವಿಕೆಟ್ ಪಡೆದು ಹೀಯಾಳಿಸಿದ್ದಕ್ಕೆ ನಿನ್ನೆಯ ಪಂದ್ಯದಲ್ಲಿ ವೀರಾವೇಶದ ಪ್ರದರ್ಶನ ನೀಡಿ ಬೌಲರ್ ಬೆವರಿಳಿಸಿರುವ ವಿಡಿಯೋ ವೈರಲ್ ಆಗಿದೆ. 

2017ರಲ್ಲಿ ವಿಂಡೀಸ್ ಪ್ರವಾಸದಲ್ಲಿ ಜಮೈಕಾ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ವಿರಾಟ್ ಕೊಹ್ಲಿಯ ವಿಕೆಟ್ ಪಡೆದಿದ್ದ ವಿಲಿಯಮ್ಸ್ ಅಂದು ನೋಟ್ ಬುಕ್ ನಲ್ಲಿ ಬರೆದಿಡುವಂತೆ ಸನ್ಹೆ ಮಾಡಿದ್ದರು. ಇದಾದ ಎರಡು ವರ್ಷಗಳ ಬಳಿಕ ವಿಲಿಯಮ್ಸ್ ಗೆ ಭರ್ಜರಿ ಸಿಕ್ಸರ್ ಬಾರಿಸಿದ ಕೊಹ್ಲಿ ಅದೇ ನೋಟ್ ಬುಕ್ ಸನ್ಹೆ ಮೂಲಕ ತಿರುಗೇಟು ನೀಡಿದ್ದಾರೆ. 

ವಿಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ 50 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 6 ಬೌಂಡರಿ ಸೇರಿದಂತೆ ಅಜೇಯ 94 ರನ್ ಪೇರಿಸಿ ತಂಡಕ್ಕೆ ಗೆಲುವಿನ ಸಿಹಿ ನೀಡಿದ್ದರು.

 
 
 
 
 
 
 
 
 
 
 
 
 

You do not mess with the Skip! #TeamIndia #INDvWI @paytm

A post shared by Team India (@indiancricketteam) on

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com