ಎದುರಾಳಿ ಬೌಲರ್ ಸುಮ್ಮನಾದ್ರೂ ಕೊಹ್ಲಿಯ ಆಕ್ರೋಶ ಮಾತ್ರ ತಣ್ಣಗಾಗಿಲ್ಲ, ಈ ವಿಡಿಯೋ ನೋಡಿ!

ವಿಂಡೀಸ್ ವಿರುದ್ಧದ ಟಿ20 ಸರಣಿಯನ್ನು ಟೀಂ ಇಂಡಿಯಾ ಭರ್ಜರಿಯಾಗಿ ಗೆದ್ದುಕೊಂಡಿದೆ. ಆದರೆ ಪಂದ್ಯದಲ್ಲಿ ಎದುರಾಳಿ ಬೌಲರ್ ನಿನ್ನ ಸಹವಾಸ ಬೇಡ ಎಂದು ಸುಮ್ಮನಾದ್ರೂ ವಿರಾಟ್ ಕೊಹ್ಲಿ ಮಾತ್ರ ಆತನನ್ನು ಕೆಣಕದೆ ಬಿಡಲಿಲ್ಲ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿರಾಟ್ ಕೊಹ್ಲಿ-ಕೆಸ್ರಿಕ್ ವಿಲಿಯಮ್ಸ್
ವಿರಾಟ್ ಕೊಹ್ಲಿ-ಕೆಸ್ರಿಕ್ ವಿಲಿಯಮ್ಸ್
Updated on: 

ಮುಂಬೈ: ವಿಂಡೀಸ್ ವಿರುದ್ಧದ ಟಿ20 ಸರಣಿಯನ್ನು ಟೀಂ ಇಂಡಿಯಾ ಭರ್ಜರಿಯಾಗಿ ಗೆದ್ದುಕೊಂಡಿದೆ. ಆದರೆ ಪಂದ್ಯದಲ್ಲಿ ಎದುರಾಳಿ ಬೌಲರ್ ನಿನ್ನ ಸಹವಾಸ ಬೇಡ ಎಂದು ಸುಮ್ಮನಾದ್ರೂ ವಿರಾಟ್ ಕೊಹ್ಲಿ ಮಾತ್ರ ಆತನನ್ನು ಕೆಣಕದೆ ಬಿಡಲಿಲ್ಲ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮುಂಬೈನಲ್ಲಿ ನಡೆದ ಕೊನೆಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 67 ರನ್ ಗಳಿಂದ ಭರ್ಜರಿ ಜಯ ಗಳಿಸಿದೆ. ಇನ್ನು ಈ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೇವಲ 29 ಎಸೆತಗಳಲ್ಲಿ 7 ಭರ್ಜರಿ ಸಿಕ್ಸರ್ ಮತ್ತು 4 ಬೌಂಡರಿ ಬಾರಿಸಿ ಅಜೇಯ 70 ರನ್ ಸಿಡಿಸಿದ್ದರು. 

ಇದರೊಂದಿಗೆ ತಂಡ 240 ರನ್ ಗಳ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು. ಇನ್ನು ಟೂರ್ನಿಯಲ್ಲಿ ವಿಂಡೀಸ್ ಬೌಲರ್ ಕೆಸ್ರಿಕ್ ವಿಲಿಯಮ್ಸ್ ಮತ್ತು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಧ್ಯೆ ದೊಡ್ಡ ಸಂಘರ್ಷವೆ ಎದುರಾಗಿತ್ತು. ಎರಡು ವರ್ಷಗಳ ಹಳೆಯ ವಿಚಾರಕ್ಕೆ ವಿರಾಟ್ ಕೊಹ್ಲಿ ಈ ಟೂರ್ನಿಯಲ್ಲಿ ಪ್ರತೀಕಾರ ತೀರಿಸಿಕೊಂಡಿದ್ದರು. 

 
 
 
 
 
 
 
 
 
 
 
 
 

Wohooooo - Look where I Hit that one #TeamIndia #INDvWI @paytm

A post shared by Team India (@indiancricketteam) on

ಇದರಿಂದ ಹೆದರಿದ ಕೆಸ್ರಿಕ್ ನಂತರ ಕೊಹ್ಲಿಯ ವಿಕೆಟ್ ಜೊತೆಗೆ ಬೇರೆ ಬ್ಯಾಟ್ಸ್ ಮನ್ ಗಳ ವಿಕೆಟ್ ಪಡೆದರೂ ಸಂಭ್ರಮಾಚರಣೆ ಮಾಡದೇ ಸುಮ್ಮನೆ ಬಾಯಿ ಮೇಲೆ ಬೆರಳಿಟ್ಟು ಸುಮ್ಮನಿರುವಂತೆ ಸಹ ಆಟಗಾರರಿಗೆ ಸೂಚಿಸುತ್ತಿದ್ದರು. ಇದಕ್ಕೂ ಸುಮ್ಮನಾಗದ ಕೊಹ್ಲಿ ಮೂರನೇ ಟಿ20 ಪಂದ್ಯದಲ್ಲಿ ಎರಡು ಎಸೆತಗಳಲ್ಲಿ ಬೀಟ್ ಮಾಡಿದ್ದ ವಿಲಿಯಮ್ಸ್ ಗೆ ಇದೆಲ್ಲಾ ನಡೆಯಲ್ಲ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. 

 
 
 
 
 
 
 
 
 
 
 
 
 

You do not mess with the Skip! #TeamIndia #INDvWI @paytm

A post shared by Team India (@indiancricketteam) on

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com