ಸರಣಿ ನಿರ್ಣಾಯಕ ಪಂದ್ಯ: ಪೂರನ್, ಪೊಲಾರ್ಡ್ ಭರ್ಜರಿ ಬ್ಯಾಟಿಂಗ್, 315 ರನ್ ಪೇರಿಸಿದ ವಿಂಡೀಸ್

ನಿಕೋಲಸ್ ಪೂರನ್ ಮತ್ತು ಕೀರನ್ ಪೊಲಾರ್ಡ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ನಿಗದಿತ ಓವರ್ ನಲ್ಲಿ 315 ರನ್ ಪೇರಿಸಿದೆ.
ಭಾರತ-ವಿಂಡೀಸ್
ಭಾರತ-ವಿಂಡೀಸ್
Updated on: 

ಕಟಕ್: ನಿಕೋಲಸ್ ಪೂರನ್ ಮತ್ತು ಕೀರನ್ ಪೊಲಾರ್ಡ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ನಿಗದಿತ ಓವರ್ ನಲ್ಲಿ 315 ರನ್ ಪೇರಿಸಿದೆ. 

ಕಟಕ್ ನಲ್ಲಿ ನಡೆಯುತ್ತಿರುವ ಸರಣಿ ನಿರ್ಣಾಯಕ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 5 ವಿಕೆಟ್ ನಷ್ಟಕ್ಕೆ 315 ರನ್ ಪೇರಿಸಿದ್ದು ಟೀಂ ಇಂಡಿಯಾಗೆ 316 ರನ್ ಗಳ ಗುರಿ ನೀಡಿದೆ. 

ವಿಂಡೀಸ್ ಪರ ಬ್ಯಾಟಿಂಗ್ ನಲ್ಲಿ ಲೂವಿಸ್ 21, ಶಾಹಿ ಹೋಪ್ 42, ಹೆಟ್ಮರ್ 37, ನಿಕೋಲಸ್ ಪೂರನ್ 89 ಮತ್ತು ಕೀರನ್ ಪೊಲಾರ್ಡ್ ಅಜೇಯ 74 ರನ್ ಪೇರಿಸಿದ್ದಾರೆ. 

ಭಾರತ ಪರ ಬೌಲಿಂಗ್ ನಲ್ಲಿ ನವದೀಪ್ ಶೈನಿ 2, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com