ಭಾರತದ ಕಾಲೆಳೆದ ಮಲಿಕ್'ಗೆ ಮುಟ್ಟಿಕೊಳ್ಳುವಂತೆ ತಿರುಗೇಟು ಕೊಟ್ಟ ಟೀಂ ಇಂಡಿಯಾ ಅಭಿಮಾನಿಗಳು, ಟ್ವೀಟ್ ವೈರಲ್!

ಸುಖಾಸುಮ್ಮನೆ ಟೀಂ ಇಂಡಿಯಾದ ಕಾಲೆಳೆದ ಪಾಕ್ ಮಾಜಿ ನಾಯಕ ಶೊಯೆಬ್ ಮಲಿಕ್ ಗೆ ಭಾರತದ ಕ್ರಿಕೆಟ್ ಅಭಿಮಾನಿಗಳು ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.
ಶೊಯೆಬ್ ಮಲಿಕ್-ಎಂಎಸ್ ಧೋನಿ
ಶೊಯೆಬ್ ಮಲಿಕ್-ಎಂಎಸ್ ಧೋನಿ
Updated on

ನವದೆಹಲಿ: ಸುಖಾಸುಮ್ಮನೆ ಟೀಂ ಇಂಡಿಯಾದ ಕಾಲೆಳೆದ ಪಾಕ್ ಮಾಜಿ ನಾಯಕ ಶೊಯೆಬ್ ಮಲಿಕ್ ಗೆ ಭಾರತದ ಕ್ರಿಕೆಟ್ ಅಭಿಮಾನಿಗಳು ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ. 

ಕ್ರಿಸ್ ಮಸ್ ಶುಭಾಶಯ ತಿಳಿಸಲು ಶೊಯಬ್ ಮಲಿಕ್ 2012ರ ಡಿಸೆಂಬರ್ 25ರಂದು ಭಾರತ ಮತ್ತು ಪಾಕ್ ನಡುವಿನ ಟಿ20 ಪಂದ್ಯವೊಂದರ ಫೋಟೋವೊಂದನ್ನು ಟ್ವೀಟ್ ಮಾಡಿದ್ದರು. 

ಪಂದ್ಯ ಸೋತ ಬಳಿಕ ಎಂಎಸ್ ಧೋನಿ ಬೇಸರದಿಂದ ನಡೆದುಕೊಂಡು ಹೋಗುತ್ತಿದ್ದಾಗ ಮಲಿಕ್ ಕಿಚಾಯಿಸಿರುವ ಫೋಟೋ ಇದಾಗಿತ್ತು. ಇದಕ್ಕೆ ಕೆರಳಿದ ಅಭಿಮಾನಿಗಳು ಭಾರತ ವಿರುದ್ಧದ ಪಂದ್ಯದಲ್ಲಿ ಮಲಿಕ್ ಡಕೌಟ್ ಆಗಿದ್ದ ಫೋಟೋವನ್ನು ಟ್ವೀಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. 

ಇನ್ನು 2007ರ ಟಿ20 ವಿಶ್ವಕಪ್ ಗೆದ್ದ ಭಾರತದ ಫೋಟೋವನ್ನು ಟ್ವೀಟ್ ಮಾಡಿ ನಿಮಗೂ ಕೂಡ ಕ್ರಿಸ್ ಮಸ್ ಶುಭಾಶಯಗಳು ಎಂದು ಕಾಲೆಳೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com