ಧೋನಿ ಚಾಣಾಕ್ಷತೆ ಅನುಸರಿಸಿ ಮೊದಲ ಯಶಸ್ವಿ ಕಂಡ ವಿಕೆಟ್ ಕೀಪರ್ ಮೊಹಮ್ಮದ್, ವಿಡಿಯೋ ವೈರಲ್!

ವಿಕೆಟ್ ಹಿಂದೆ ಚಾಣಾಕ್ಷ ಎಂಎಸ್ ಧೋನಿ ಮಾಡಿರುವ ಸಾಧನೆಗಳು ಅಪಾರ. ಧೋನಿಗೆ ಸರಿಸಮಾನರಾಗಿ ನಿಲ್ಲುವವರು ಸದ್ಯಕ್ಕೆ ಯಾರು ಇಲ್ಲ. ಆದರೆ ಧೋನಿಯ...
ಎಂಎಸ್ ಧೋನಿ-ಮೊಹಮ್ಮದ್ ಶಹಜಾದ್
ಎಂಎಸ್ ಧೋನಿ-ಮೊಹಮ್ಮದ್ ಶಹಜಾದ್
Updated on
ನವದೆಹಲಿ: ವಿಕೆಟ್ ಹಿಂದೆ ಚಾಣಾಕ್ಷ ಎಂಎಸ್ ಧೋನಿ ಮಾಡಿರುವ ಸಾಧನೆಗಳು ಅಪಾರ. ಧೋನಿಗೆ ಸರಿಸಮಾನರಾಗಿ ನಿಲ್ಲುವವರು ಸದ್ಯಕ್ಕೆ ಯಾರು ಇಲ್ಲ. ಆದರೆ ಧೋನಿಯ ಚಾಣಾಕ್ಷತೆ ಅನುಸರಿಸಲು ಹೋಗಿ ವಿಫಲರಾಗಿದ್ದೆ ಹೆಚ್ಚು. ಅಂತಹದರಲ್ಲಿ ಮೊಹಮ್ಮದ್ ಶಹಜಾದ್ ಯಶಸ್ವಿಯಾಗಿದ್ದಾರೆ. 
ಎಂಎಸ್ ಧೋನಿ ವಿಕೆಟ್ ನೋಡದೆ ಚೆಂಡನ್ನು ನೇರವಾಗಿ ವಿಕೆಟ್ ಗೆ ಹೊಡೆದು ರನೌಟ್ ಮಾಡಿರುವ ಸಾಕಷ್ಟು ಉದಾಹರಣೆಗಳಿವೆ. ಅಂತೆ ಆಫ್ಗಾನಿಸ್ತಾನದ ಕ್ರಿಕೆಟಿಗ ಮೊಹಮ್ಮದ್ ಶಹಜಾದ್ ಸಹ ವಿಕೆಟ್ ಅನ್ನು ನೋಡದೆ ರನೌಟ್ ಮಾಡಿದ್ದಾರೆ. 
ಬಾಂಗ್ಲಾದೇಶ ಪ್ರಿಮಿಯರ್ ಲೀಗ್(ಬಿಪಿಎಲ್)ನಲ್ಲಿ ಚಿತ್ತಗಾಂಗ್ ವಿಕಿಂಗ್ಸ್ ಮತ್ತು ಢಾಕಾ ಡೈನಮೆಟ್ಸ್ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಢಾಕಾ ಡೈನಮೆಟ್ಸ್ ತಂಡದ ಬ್ಯಾಟ್ಸ್ ಮನ್ ಮಿಜಾನೂರ್ ರೆಹಮಾನ್ ಅವರನ್ನು ರನೌಟ್ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
ಢಾಕಾ ಡೈನಮೆಟ್ಸ್ ವಿರುದ್ಧ ಚಿತ್ತಗಾಂಗ್ ವಿಕಿಂಗ್ಸ್ 11 ರನ್ ಗಳಿಂದ ಭರ್ಜರಿ ಜಯಗಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com