ಮೈದಾನದಲ್ಲಿ ಟೀಂ ಇಂಡಿಯಾ ಆಟಗಾರರ ಲೆಗ್ ಶೇಕ್ ಡ್ಯಾನ್ಸ್, ನಾಗಿಣಿ ಡ್ಯಾನ್ಸ್ ವಿಡಿಯೋ ವೈರಲ್!

ಆಸ್ಟ್ರೇಲಿಯಾ ಮಣ್ಣಿನಲ್ಲಿ ಟೆಸ್ಟ್ ಸರಣಿ ಗೆಲ್ಲುವ ಮೂಲಕ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಐತಿಹಾಸಿಕ ದಾಖಲೆ ಸೃಷ್ಟಿಸಿದೆ. ಈ ಸರಣಿ ಗೆದ್ದ ಬಳಿಕ ಟೀಂ ಇಂಡಿಯಾ ಆಟಗಾರರು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಕುಣಿದು ಕುಪ್ಪಳಿಸಿದ್ದಾರೆ.
ಟೀಂ ಇಂಡಿಯಾ ಆಟಗಾರರರ ಡ್ಯಾನ್ಸ್
ಟೀಂ ಇಂಡಿಯಾ ಆಟಗಾರರರ ಡ್ಯಾನ್ಸ್
Updated on: 
ಸಿಡ್ನಿ: ಆಸ್ಟ್ರೇಲಿಯಾ ಮಣ್ಣಿನಲ್ಲಿ ಟೆಸ್ಟ್  ಸರಣಿ ಗೆಲ್ಲುವ ಮೂಲಕ  ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಐತಿಹಾಸಿಕ ದಾಖಲೆ ಸೃಷ್ಟಿಸಿದ್ದು, ಈ ಖುಷಿಯಲ್ಲೇ ಆಟಗಾರರು ಮೈದಾನದಲ್ಲಿ ಮಾಡಿದ್ದ ಲೆಗ್ ಶೇಕ್ ಡ್ಯಾನ್ಸ್ ಇದೀಗ ವೈರಲ್ ಆಗುತ್ತಿದೆ.
ಮೂರನೇ ಟೆಸ್ಟ್ ಪಂದ್ಯ ಗೆದ್ದ ಬಳಿಕ ಸರಣಿಯಲ್ಲಿ ಪ್ರಾಬಲ್ಯ ಸಾಧಿಸುವುದನ್ನು ಖಚಿತಪಡಿಸಿದ ಕೊಹ್ಲಿ ಬಳಗ, ನಾಲ್ಕನೆೇ ಪಂದ್ಯ ಡ್ರಾನಲ್ಲಿ ಅಂತ್ಯವಾಗುವ ಮೂಲಕ 2-1 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ. ಮಳೆ ಅಡ್ಡಿಯಾಗದಿದ್ದಲ್ಲಿ ಈ ಪಂದ್ಯವನ್ನು ಸಹ ಟೀಂ ಇಂಡಿಯಾ ಗೆಲ್ಲುವ ಅವಕಾಶ ನಿಚ್ಚಳವಾಗಿತ್ತು.
ಈ ಸರಣಿ ಗೆದ್ದ ಬಳಿಕ ಟೀಂ ಇಂಡಿಯಾ ಆಟಗಾರರು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಕೂಡಾ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಆದರೆ, ಚೇತೇಶ್ವರ ಪೂಜಾರ ಮಾತ್ರ ಡ್ಯಾನ್ಸ್ ಮಾಡಿಲ್ಲ. ಈ ಕ್ಷಣವನ್ನು ಆನಂದಿಸುವಂತೆ ರಿಷಭ್ ಪಂತ್ ಮೂವರು ಬ್ಯಾಟ್ಸ್ ಮನ್ ಗಳಿಗೆ  ಒತ್ತಡ ಹಾಕಿರುವ ದೃಶ್ಯ ಕೂಡಾ ವಿಡಿಯೋದಲ್ಲಿ ಸೆರೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com