ಆಸಿಸ್ ನೆಲದಲ್ಲಿ ಕೂದಲೆಳೆ ಅಂತರದಲ್ಲಿ ಟೀಂ ಇಂಡಿಯಾ ಆಟಗಾರರ 4 ಅಪರೂಪದ ದಾಖಲೆ ಮಿಸ್!

ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಕಾಂಗರೂಗಳನ್ನು ಸೋಲಿಸುವ ಮೂಲಕ ಭಾರತ ತಂಡವೇನೋ ಐತಿಹಾಸಿಕ ಸಾಧನೆ ಗೈದಿದೆಯಾದರೂ, ಇದೇ ಪಂದ್ಯದಲ್ಲಿ ಭಾರತ ತಂಡದ ಪ್ರಮುಖ ಆಟಗಾರರು ಕೂದಲೆಳೆ ಅಂತರದಲ್ಲಿ ಹಲವು ದಾಖಲೆಗಳನ್ನು ಮಿಸ್ ಮಾಡಿಕೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮೆಲ್ಬೋರ್ನ್​: ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಕಾಂಗರೂಗಳನ್ನು ಸೋಲಿಸುವ ಮೂಲಕ ಭಾರತ ತಂಡವೇನೋ ಐತಿಹಾಸಿಕ ಸಾಧನೆ ಗೈದಿದೆಯಾದರೂ, ಇದೇ ಪಂದ್ಯದಲ್ಲಿ ಭಾರತ ತಂಡದ ಪ್ರಮುಖ ಆಟಗಾರರು ಕೂದಲೆಳೆ ಅಂತರದಲ್ಲಿ ಹಲವು ದಾಖಲೆಗಳನ್ನು ಮಿಸ್ ಮಾಡಿಕೊಂಡಿದ್ದಾರೆ.
ಹೌದು.. ಇಂದು ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆಸಿಸ್ ತಂಡವನ್ನು 7 ವಿಕೆಟ್ ಗಳ ಅಂತರದಲ್ಲಿ ಬಗ್ಗು ಬಡಿದ ವಿರಾಟ್ ಕೊಹ್ಲಿ ಪಡೆ ಆಸಿಸ್ ನೆಲದಲ್ಲಿ ತನ್ನ ಚೊಚ್ಚಲ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿತು. ಆದರೆ ಇದೇ ಪಂದ್ಯದಲ್ಲಿ ಭಾರತದ ಪ್ರಮುಖ ಆಟಗಾರರು ಕೂದಲೆಳೆ ಅಂತರದಲ್ಲಿ ಕೆಲವು ಅಪರೂಪದ ದಾಖಲೆಗಳನ್ನು ಮಿಸ್ ಮಾಡಿಕೊಂಡಿದ್ದಾರೆ.
ಟೀಂ ಇಂಡಿಯಾ ಆಟಗಾರರು ಮಿಸ್ ಮಾಡಿಕೊಂಡ ದಾಖಲೆಗಳ ಪಟ್ಟಿ ಇಂತಿದೆ.
1. ಶಿಖರ್​ ಧವನ್​​ 5 ಸಾವಿರ ರನ್ ಸಾಧನೆ
ಇನ್ನು ಈ ಪಂದ್ಯದಲ್ಲಿ ತಂಡದ ಆರಂಭಿಕ ಆಟಗಾರ ಶಿಖರ್​ ಧವನ್​ 33ರನ್​ ಗಳಿಸಿದ್ದರೆ 5 ಸಾವಿರ ರನ್​ ಗಳಿಸಿದ 7ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದರು. ಆದರೆ ಇಂದು ಧವನ್ ಕೇವಲ 23 ರನ್ ಗಳಿಸಿ ಕೇವಲ 10 ರನ್ ಗಳ ಅಂತರದಲ್ಲಿ 5 ಸಾವಿರ ರನ್ ಪೂರೈಸಿದ ಆಟಗಾರ ಎಂಬ ದಾಖಲೆ ಮಿಸ್ ಮಾಡಿಕೊಂಡಿದ್ದಾರೆ. ಒಟ್ಟು 118 ಏಕದಿನ ಪಂದ್ಯಗಳಲ್ಲಿ 117 ಇನ್ನಿಂಗ್ಸ್ ಆಡಿರುವ ಧವನ್ 44.95 ಸರಾಸರಿಯಲ್ಲಿ 4990 ರನ್ ಗಳಿಸಿದ್ದಾರೆ. ಈಗಾಗಲೇ 114 ಇನ್ನಿಂಗ್ಸ್ ಗಳಲ್ಲಿ ವೆಸ್ಟ್​ ವಿಂಡೀಸ್​​ನ ರಿಚರ್ಡ್ ಸನ್​ ಹಾಗೂ 101 ಇನ್ನಿಂಗ್ಸ್ ನಿಂದ ಕ್ಯಾಪ್ಟನ್​​ ಕೊಹ್ಲಿ 5 ಸಾವಿರ ರನ್​ ಗಳಿಸಿರುವ ಆಟಗಾರರಾಗಿದ್ದಾರೆ.
2. ರೋಹಿತ್​ ಶರ್ಮಾ ಮೆಲ್ಬೋರ್ನ್ ದಾಖಲೆ
ಇಂದಿನ ಪಂದ್ಯದಲ್ಲಿ ಭಾರತ ತಂಡದ ಉಪನಾಯಕ ರೋಹಿತ್​ ಶರ್ಮಾ 28ರನ್ ​ಗಳಿಸಿದ್ದರೆ ಮೆಲ್ಬೋರ್ನ್​ ಮೈದಾನದಲ್ಲಿ ಭಾರತದ ಪರ ಅತಿ ಹೆಚ್ಚು ರನ್​ ಗಳಿಕೆಯ ದಾಖಲೆ ನಿರ್ಮಿಸುತ್ತಿದ್ದರು. ಆದರೆ ರೋಹಿತ್ ಈ ಪಂದ್ಯದಲ್ಲಿ ಕೇವಲ 9 ರನ್ ಗಳಿಸಿ ಸಿಡಲ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಅತೀ ಹೆಚ್ಚು ರನ್  ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಮಾಜಿ ಕ್ರಿಕೆಟಿಗ ಶ್ರೀಕಾಂತ್ ಇದ್ದಾರೆ. ಶ್ರೀಕಾಂತ್​ ಈ ಮೈದಾನದಲ್ಲಿ 368ರನ್​ ಸಿಡಿಸಿರುವ ದಾಖಲೆ ಇದೆ. 
3. ರವೀಂದ್ರ ಜಡೇಜಾ
ಭಾರತ ತಂಡದ ಪ್ರಮುಖ ಆಲ್ ರೌಂಡರ್, ರವೀಂದ್ರ ಜಡೇಜಾ ಕೇವಲ 10ರನ್​ ಗಳಿಸಿದ್ದರೆ, ಏಕದಿನ ಕ್ರಿಕೆಟ್ ನಲ್ಲಿ 2 ಸಾವಿರ ರನ್​​ ಪೊರೈಕೆ ಹಾಗೂ 150ಕ್ಕೂ ಹೆಚ್ಚು ವಿಕೆಟ್​ ಪಡೆದುಕೊಂಡಿರುವ ವಿಶ್ವದ 26ನೇ ಆಲ್ ರೌಂಡರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದರು. ಆದರೆ ಇಂದು ಜಡೇಜಾಗೆ ಬ್ಯಾಟ್ ಬೀಸುವ ಅವಕಾಶವೇ ಸಿಗಲಿಲ್ಲ. ಇನ್ನು ಜಡೇಜಾ ಒಟ್ಟು 147 ಏಕದಿನ ಪಂದ್ಯಗಳನ್ನಾಡಿದ್ದು,  30.62 ಸರಾಸರಿಯಲ್ಲಿ 1990 ರನ್ ಪೇರಿಸಿದ್ದಾರೆ. ಅಲ್ಲದೆ 171 ವಿಕೆಟ್ ಪಡೆದಿದ್ದಾರೆ.
4. ಶಿಖರ್​ ಧವನ್-ರೋಹಿತ್​ ಶರ್ಮಾ ಜೋಡಿ
ಅಂತೆಯೇ ರೋಹಿತ್ ಶರ್ಮಾ ಹಾಗೂ ಶಿಖರ್​ ಧವನ್ ಜೋಡಿ​ ಮೂರನೇ ಏಕದಿನ ಪಂದ್ಯದಲ್ಲಿ 92ರನ್ ಗಳ ಜೊತೆಯಾಟವಾಡಿದ್ದರೆ ಆಸ್ಟ್ರೇಲಿಯಾ ನೆಲದಲ್ಲಿ 1 ಸಾವಿರ ರನ್​ ಗಳಿಸಿದ ಮೊದಲ ಭಾರತೀಯ ಆರಂಭಿಕ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿತ್ತು. ಆದರೆ ಇಂದಿನ ಪಂದ್ಯದಲ್ಲಿ ಈ ಜೋಡಿ ಕೇವಲ 15 ರನ್ ಗಳಿಗೇ ಬೇರ್ಪಟ್ಟಿತ್ತು. 9 ರನ್  ಗಳಿಸಿದ್ದ ರೋಹಿತ್ ಶರ್ಮಾ ರನ್ನು ಸಿಡಲ್ ಔಟ್ ಮಾಡಿದರು. ಬಳಿಕ 23 ರನ್ ಗಳಿಸಿದ್ದ ಧವನ್ ಕೂಡ ಸ್ಟಾಯಿನಿಸ್ ಬೌಲಿಂಗ್ ನಲ್ಲಿ ಔಟ್ ಆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com