ಐಸಿಸಿ ವಿಶ್ವಕಪ್ 2019: ಸಚಿನ್ ರ ಅಪರೂಪದ ದಾಖಲೆ ಸರಿಗಟ್ಟಿದ 'ಹಿಟ್' ಮ್ಯಾನ್ ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ!

ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ಬೌಲರ್ ಗಳ ಬೆವರಿಳಿಸಿ ಶತಕ ಸಾಧನೆ ಗೈದ ರೋಹಿತ್ ಶರ್ಮಾ, ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಅಪರೂಪದ ದಾಖಲೆಯನ್ನು ಸರಿಗಟ್ಟಿದ್ದಾರೆ.
ಮೂರನೇ ಬಾರಿಗೆ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದ ರೋಹಿತ್ ಶರ್ಮಾ
ಮೂರನೇ ಬಾರಿಗೆ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದ ರೋಹಿತ್ ಶರ್ಮಾ
ಲಂಡನ್: ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ಬೌಲರ್ ಗಳ ಬೆವರಿಳಿಸಿ ಶತಕ ಸಾಧನೆ ಗೈದ ರೋಹಿತ್ ಶರ್ಮಾ, ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಅಪರೂಪದ ದಾಖಲೆಯನ್ನು ಸರಿಗಟ್ಟಿದ್ದಾರೆ.
ಹೌದು.. ಇಂದು ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ, 92 ಎಸೆತಗಳಲ್ಲಿ 104ರನ್ ಗಳನ್ನು ಸಿಡಿಸಿದರು. ಅವರ ಈ ಅಮೋಘ ಇನ್ನಿಂಗ್ಸ್ ನಲ್ಲಿ 7 ಬೌಂಡರಿಗಳು ಮತ್ತು 5 ಅದ್ಭುತ ಸಿಕ್ಸರ್ ಗಳಿದ್ದವು. ರೋಹಿತ್ ಗೆ ಇದು ಟೂರ್ನಿಯ 4ನೇ ಶತಕವಾಗಿದ್ದು, ಏಕದಿನ ವೃತ್ತಿ ಜೀವನದ 26ನೇ ಶತಕವಾಗಿದೆ.
ರೋಹಿತ್ ಶರ್ಮಾ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದಾಗಿಯೇ ಭಾರತ ಕತಂಡ ಬಾಂಗ್ಲಾದೇಶಕ್ಕೆ 300ಕ್ಕೂ ಅಧಿಕ ರನ್ ಗಳ ಗುರಿ ನೀಡುವಲ್ಲಿ ಯಶಸ್ವಿಯಾಯಿತು. ಇದೇ ಕಾರಣಕ್ಕೆ ಇಂದು ರೋಹಿತ್ ಶರ್ಮಾ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದು ಹಾಲಿ ಟೂರ್ನಿಯಲ್ಲಿ ರೋಹಿತ್ ಶರ್ಮಾ ಪಡೆದ 3ನೇ ಪಂದ್ಯ ಶ್ರೇಷ್ಛ ಪ್ರಶಸ್ತಿಯಾಗಿದೆ.
ಇದಕ್ಕೂ ಮೊದಲು, ದಕ್ಷಿಣ ಆಫ್ರಿಕಾ ವಿರುದ್ಧ (ಅಜೇಯ 122), ಪಾಕಿಸ್ತಾನ (140 ರನ್)ದ ವಿರುದ್ಧ ರೋಹಿತ್ ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದಿದ್ದರು. ಇದು ಅವರ ಮೂರನೇ ಪಂದ್ಯ ಶ್ರೇಷ್ಠ ಪ್ರಶಸ್ತಿಯಾಗಿದೆ. ಅಂತೆಯೇ ಈ ಪ್ರಶಸ್ತಿ ಮೂಲಕ ರೋಹಿತ್ ಶರ್ಮಾ ಭಾರತದ ಲೆಜೆಂಡ್ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಅಪರೂಪದ ದಾಖಲೆಯನ್ನು ಸರಿಗಟ್ಟಿದ್ದು, 2003ರ ವಿಶ್ವಕಪ್ ಟೂರ್ನಿಯಲ್ಲಿ ಸಚಿನ್ ಕೂಡ 3 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. 
ಇನ್ನು ವಿಶ್ವಕಪ್ ಟೂರ್ನಿಯಲ್ಲಿ ಅತೀ ಹೆಚ್ಚು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಭಾರತೀಯರ ಪಟ್ಟಿಯಲ್ಲಿ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಅಗ್ರ ಸ್ಥಾನದಲ್ಲಿದ್ದು, ಯುವಿ 2011ರ ವಿಶ್ವಕಪ್ ಟೂರ್ನಿಯಲ್ಲಿ ನಾಲ್ಕು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com