ಎಂಎಸ್ ಧೋನಿ
ಕ್ರಿಕೆಟ್
ಎಂಎಸ್ ಧೋನಿಗೆ ಏನಾಯ್ತು? ಆಟದ ಮಧ್ಯೆ ಮೈದಾನದಲ್ಲಿ ರಕ್ತ ಉಗುಳಿದ ಧೋನಿ, ಅಭಿಮಾನಿಗಳಲ್ಲಿ ಆತಂಕ!
ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿಧಾನಗತಿಯ ಬ್ಯಾಟಿಂಗ್ ನಿಂದಾಗಿ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಬರ್ಮಿಂಗ್ ಹ್ಯಾಮ್: ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿಧಾನಗತಿಯ ಬ್ಯಾಟಿಂಗ್ ನಿಂದಾಗಿ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ ಇಂಗ್ಲೆಂಡ್ ವಿರುದ್ಧದ ಪಂದ್ಯದ ವೇಳೆ ಮೈದಾನದಲ್ಲೇ ಧೋನಿ ರಕ್ತ ಉಗುಳಿದ ಫೋಟೋ ವೈರಲ್ ಆಗಿದ್ದು ಇದು ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ.
ಆತಿಥೇಯ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 31 ರನ್ ಗಳಿಂದ ಸೋಲು ಕಂಡಿದೆ. ಇನ್ನು ಇದೇ ಪಂದ್ಯದಲ್ಲಿ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಗಾಯದ ನಡುವೆಯೂ ಎಂಎಸ್ ಧೋನಿ ಬ್ಯಾಟಿಂಗ್ ಮುಂದುವರಿಸಿದ್ದರು.
ಕೈ ಬೆರಳಿನಿಂದ ಜಿನುಗುತ್ತಿದ್ದ ರಕ್ತವನ್ನು ಚೀಪಿ ಧೋನಿ ಅದನ್ನು ಮೈದಾನದಲ್ಲಿ ಉಗುಳಿದ್ದರು. ಈ ಫೋಟೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಧೋನಿ ವೃತ್ತಿಪರತೆ ಹಾಗೂ ದೇಶಕ್ಕಾಗಿ ತಮ್ಮ ನೋವನ್ನೇ ಮರೆತು ಆಡುತ್ತಿದ್ದಾರೆ ಎಂದು ಕೊಂಡಾಡಿದ್ದಾರೆ.
@msdhoni you are the best, we love you champ

