ಅಂತೆಯೇ ಬಿಸಿಸಿಐ ಕೂಡ ದೇಶಕಂಡ ಸರ್ವಶ್ರೇಷ್ಠ ನಾಯಕನಿಗೆ ಶುಭಾಶಯ ತಿಳಿಸಿದ್ದು, ಸತತ ನಾಲ್ಕು ವಿಶ್ವಕಪ್ ಗಳು, ನಾಲ್ಕು ಬಗೆಯ ಲುಕ್.. ಎಂದು ಬರೆದು ಧೋನಿಗೆ ಶುಭ ಕೋರಿದೆ. ಇದೇ ವೇಳೆ ವಿಶ್ವದ ನಾನಾ ತಂಡಗಳ ಪ್ರಮುಖ ಆಟಗಾರರು ಧೋನಿ ಕುರಿತಂತೆ ಮಾತನಾಡಿರುವ ಸಂಭಾಷಣೆಯ ತುಣುಕನ್ನು ಐಸಿಸಿ ಅಪ್ಲೋಡ್ ಮಾಡಿದ್ದು, ವಿಡಿಯೋದಲ್ಲಿ ಇಂಗ್ಲೆಂಡ್ ತಂಡದ ಜಾಸ್ ಬಟ್ಲರ್, ಬೆನ್ ಸ್ಟೋಕ್ಸ್, ಆಫ್ಘಾನಿಸ್ತಾನದ ವಿಕೆಟ್ ಕೀಪರ್ ಮಹಮದ್ ಶಹ್ಜಾದ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾತನಾಡಿದ್ದು, ಇದಲ್ಲದೇ ಧೋನಿ ಕುರಿತಂತೆ ವಿಶ್ವದ ದಿಗ್ಗಜ ಆಟಗಾರರ ಹೇಳಿಕೆಯನ್ನು ಕೋಟ್ ಮಾಡಲಾಗಿದೆ.