ಐಸಿಸಿ ವಿಶ್ವಕಪ್ 2019, ಮೊದಲ ಸೆಮಿ ಫೈನಲ್: ಮುಂದುವರಿದ ಇಂಡೋ-ಕಿವೀಸ್ ಪಂದ್ಯ, ರಾಸ್ ಟೇಲರ್ ಔಟ್

ಮಳೆಯಿಂದಾಗಿ ಸ್ಥಗಿತಗೊಂಡಿದ್ದ ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯ ಇಂದು ಆರಂಭವಾಗಿದ್ದು, ನ್ಯೂಜಿಲೆಂಡ್ ತಂಡ ತನ್ನ ಕೊನೆಯ ಹಂತದ ಬ್ಯಾಟಿಂಗ್ ಮುಂದುವರೆಸಿದೆ.
ಭಾರತ ತಂಡ
ಭಾರತ ತಂಡ
Updated on: 
ಲಂಡನ್: ಮಳೆಯಿಂದಾಗಿ ಸ್ಥಗಿತಗೊಂಡಿದ್ದ ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯ ಇಂದು ಆರಂಭವಾಗಿದ್ದು, ನ್ಯೂಜಿಲೆಂಡ್ ತಂಡ ತನ್ನ ಕೊನೆಯ ಹಂತದ ಬ್ಯಾಟಿಂಗ್ ಮುಂದುವರೆಸಿದೆ.
ನಿನ್ನೆ ಮಳೆಯ ಬಂದಾಗ ನ್ಯೂಜಿಲೆಂಡ್ ತಂಡ  46.1 ಓವರ್ ನಲ್ಲಿ ಐದು ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿತ್ತು. ಇಂದು ಆಟ ಮುಂದುವರೆದಿದ್ದು, ಅಂತಿಮ ಹಂತದಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದ ಕಿವೀಸ್ ಆಟಗಾರರನ್ನು ಭಾರತೀಯ ಬೌಲರ್ ಗಳ ಕಟ್ಟಿಹಾಕುವ ಯತ್ನ ನಡೆಸಿದ್ದಾರೆ. ಪರಿಣಾಮ ನಿನ್ನೆ ಅರ್ಧಶತಕ ಸಿಡಿಸಿ ಕ್ರೀಸ್ ನಲ್ಲಿದ್ದ ರಾಸ್ ಟೇಲರ್ ಇಂದು ಬುಮ್ರಾ ಬೌಲಿಂಗ್ ನಲ್ಲಿ ಔಟಾಗಿದ್ದು, ಅವರ ಹಿಂದೆಯೇ ಲಾಥಮ್ ಕೂಡಭುವಿ ಬೌಲಿಂಗ್ ನಲ್ಲಿ ಔಟ್ ಆಗಿದ್ದಾರೆ.
ಇತ್ತೀಚಿನ ವರದಿಗಳು ಬಂದಾಗ ನ್ಯೂಜಿಲೆಂಡ್ ತಂಡ 49 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 232 ರನ್ ಗಳಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com