ತಮ್ಮ ಸಾಮರ್ಥ್ಯ ತೋರಿಸಲು ಆಗಲ್ಲ, ಆದ್ರೆ ವಿಶ್ವಕಪ್‌ನಲ್ಲಿ ಮಾತ್ರ ಛಾನ್ಸ್ ಬೇಕಾ?; ಪಂತ್, ಶಂಕರ್ ವಿರುದ್ಧ ಕಿಡಿ!

ಮುಂಬರುವ ಕ್ರಿಕೆಟ್ ಮಹಾ ಸಮರ ವಿಶ್ವಕಪ್ ಗೆ ಪೂರ್ವಭಾವಿ ನಡೆದ ಏಕದಿನ ಸರಣಿಯನ್ನು ಟೀಂ ಇಂಡಿಯಾ ಸೋತಿದ್ದು ಇದಕ್ಕೆ ಹಲವು ಕ್ರಿಕೆಟ್ ದಿಗ್ಗಜರು ಕಿಡಿ ಕಾರಿದ್ದಾರೆ.
ವಿಜಯ್ ಶಂಕರ್-ರಿಷಬ್ ಪಂತ್
ವಿಜಯ್ ಶಂಕರ್-ರಿಷಬ್ ಪಂತ್
Updated on
ಮುಂಬೈ: ಮುಂಬರುವ ಕ್ರಿಕೆಟ್ ಮಹಾ ಸಮರ ವಿಶ್ವಕಪ್ ಗೆ ಪೂರ್ವಭಾವಿ ನಡೆದ ಏಕದಿನ ಸರಣಿಯನ್ನು ಟೀಂ ಇಂಡಿಯಾ ಸೋತಿದ್ದು ಇದಕ್ಕೆ ಹಲವು ಕ್ರಿಕೆಟ್ ದಿಗ್ಗಜರು ಕಿಡಿ ಕಾರಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಮೊದಲ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ನಂತರ ಮೂರು ಪಂದ್ಯಗಳಲ್ಲೂ ಸೋಲು ಕಾಣುವ ಮೂಲಕ ಸ್ವದೇಶದಲ್ಲೇ ಸರಣಿ ಸೋಲಿನ ನಿರಾಶೆ ಅನುಭವಿಸಿತ್ತು. ಇನ್ನು ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಆಯ್ಕೆ ಸಂಬಂಧ ಹಲವು ಕ್ರಿಕೆಟಿಗರಿಗೆ ಅವಕಾಶ ನೀಡಲಾಗಿದ್ದು ಈ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳದ ರಿಷಬ್ ಪಂತ್ ಹಾಗೂ ವಿಜಯ್ ಶಂಕರ್ ವಿರುದ್ಧ ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೆಕರ್ ಕಿಡಿಕಾರಿದ್ದಾರೆ.
ಯುವ ಆಟಗಾರರಾದ ವಿಜಯ್ ಶಂಕರ್ ಹಾಗೂ ರಿಷಬ್ ಪಂತ್ ಅವರಿಗೆ ತಮ್ಮ ಸಾಮರ್ಥ್ಯವನ್ನು ತೋರಿಸಲು ಈ ಸರಣಿ ಹೆಚ್ಚು ಉಪಯುಕ್ತವಾಗಿತ್ತು. ಆದರೆ ಇಂತಹ ಸುವರ್ಣಾವಕಾಶವನ್ನು ನೀವೂ ಕಳೆದುಕೊಂಡಿದ್ದೀರಾ ಎಂದು ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com