ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕ್ರಿಕೆಟ್ ಇತಿಹಾಸದಲ್ಲೇ ಕಳಪೆ ಸಾಧನೆ: ತಂಡದ 10 ಬ್ಯಾಟ್ಸ್‌ಮನ್ ಶೂನ್ಯಕ್ಕೆ ಔಟ್, 4 ರನ್‌ಗಳಿಗೆ ಆಲೌಟ್!

ಕ್ರಿಕೆಟ್ ಪಂದ್ಯವೊಂದರಲ್ಲಿ ತಂಡದ 10 ಬ್ಯಾಟ್ಸ್‌ಮನ್ಗಳು ಶೂನ್ಯಕ್ಕೆ ಔಟಾಗಿದ್ದು ಬೌಲರ್ ಗಳು ನೀಡಿದ ನಾಲ್ಕು ಹೆಚ್ಚುವರಿ ರನ್ನಿಂದಾಗಿ ತಂಡವೊಂದು 4 ರನ್ ಗಳಿಗೆ ಆಲೌಟ್ ಆಗಿರುವ ಘಟನೆ ಭಾರತದಲ್ಲಿ ನಡೆದಿದೆ.
ಕೊಚ್ಚಿ: ಕ್ರಿಕೆಟ್ ಪಂದ್ಯವೊಂದರಲ್ಲಿ ತಂಡದ 10 ಬ್ಯಾಟ್ಸ್‌ಮನ್ಗಳು ಶೂನ್ಯಕ್ಕೆ ಔಟಾಗಿದ್ದು ಬೌಲರ್ ಗಳು ನೀಡಿದ ನಾಲ್ಕು ಹೆಚ್ಚುವರಿ ರನ್ನಿಂದಾಗಿ ತಂಡವೊಂದು 4 ರನ್ ಗಳಿಗೆ ಆಲೌಟ್ ಆಗಿರುವ ಘಟನೆ ಭಾರತದಲ್ಲಿ ನಡೆದಿದೆ.
ದೇಶಿ ಕ್ರಿಕೆಟ್ ನಲ್ಲಿ ಕಾಸರಗೋಡು ಅಂಡರ್ 19 ಯುವತಿಯರ ತಂಡ ವಯಾನಾಡು ತಂಡದ ವಿರುದ್ಧ 4 ರನ್ ಗಳಿಗೆ ಆಲೌಟ್ ಆಗಿದೆ. ಇಲ್ಲಿ ವಿಶೇಷವೆಂದರೆ ಕಾಸರಗೋಡು ತಂಡದ 10 ಬ್ಯಾಟ್ಸ್ ಮನ್ ಗಳು ಸೊನ್ನೆಗೆ ಔಟಾಗಿದ್ದಾರೆ. ಇನ್ನು ವಯನಾಡು ತಂಡದ ಬೌಲರ್ ಗಳು ಎಕ್ಸ್‌ಟ್ರಾ 4 ರನ್ ನೀಡಿದ್ದರಿಂದ ತಂಡ 4 ರನ್ ಪಡೆಯುವಂತಾಯಿತು.
ಟಾಸ್ ಗೆದ್ದ ಕಾಸರಗೋಡು ತಂಡದ ನಾಯಕಿ ಎಸ್ ಅಕ್ಷತಾ ಬ್ಯಾಟಿಂಗ್ ಆಯ್ದುಕೊಂಡರು. ನಂತರ ಬ್ಯಾಟಿಂಗ್ ಆರಂಭಿಸಿದ ವೀಕ್ಷಿತಾ ಮತ್ತು ಚೈತ್ರಾ ಎರಡು ಓವರ್ ವರೆಗೆ ವಿಕೆಟ್ ಬೀಳದೆ ಆಡಿಸಿದರು. 3ನೇ ಓವರ್ ನಲ್ಲಿ ವಯನಾಡು ತಂಡದ ನಾಯಕಿ ನಿತ್ಯಾ ಲೂರ್ದಾ ಬೌಲಿಂಗ್ ಮಾಡಿದ್ದು 6 ಎಸೆತಗಳಲ್ಲಿ 3 ವಿಕೆಟ್ ಪಡೆದರು. ನಂತರ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಪರೇಡ್ ನಡೆಸಿದರು.
ಇನ್ನು 5 ರನ್ ಗುರಿ ಪಡೆದ ವಯನಾಡು ತಂಡ ತಂಡದ ಆಟಗಾರರು ಮೊದಲ ಓವರ್ ನಲ್ಲೇ 5 ರನ್ ಪೇರಿಸಿ 10 ವಿಕೆಟ್ ಗಳಿಂದ ಗೆದ್ದು ಬೀಗಿದರು.

Related Stories

No stories found.

Advertisement

X
Kannada Prabha
www.kannadaprabha.com