15 ವರ್ಷಗಳ ಹಳೆಯ ದಾಖಲೆ ಮುರಿದ ಆಫ್ಘಾನ್ ಸ್ಪಿನ್ನರ್ ರಶೀದ್‌ ಖಾನ್‌!

ಆಲ್‌ರೌಂಡರ್‌ ರಶೀದ್‌ ಖಾನ್‌ ಅವರು ವೃತ್ತಿ ಜೀವನದ ಮೊದಲ ಬಾರಿ ಅಫ್ಘಾನಿಸ್ತಾನ ಟೆಸ್ಟ್‌ ತಂಡವನ್ನು ಮುನ್ನಡೆಸಿದ್ದಾರೆ.
ರಶೀದ್ ಖಾನ್
ರಶೀದ್ ಖಾನ್
Updated on: 

ಚಿತ್ತಗಾಂಗ್‌: ಆಲ್‌ರೌಂಡರ್‌ ರಶೀದ್‌ ಖಾನ್‌ ಅವರು ವೃತ್ತಿ ಜೀವನದ ಮೊದಲ ಬಾರಿ ಅಫ್ಘಾನಿಸ್ತಾನ ಟೆಸ್ಟ್‌ ತಂಡವನ್ನು ಮುನ್ನಡೆಸಿದ್ದಾರೆ. 

ಆ ಮೂಲಕ ಟೆಸ್ಟ್ ತಂಡದ ನಾಯಕತ್ವ ವಹಿಸಿದ ವಿಶ್ವದ ಅತಿ ಕಿರಿಯ ನಾಯಕ ಎಂಬ ಹೆಗ್ಗಳಿಕೆಗೆ ರಶೀದ್‌ ಭಾಜನವಾಗುವ ಮೂಲಕ 15 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು.

ಇಂದು ಬಾಂಗ್ಲಾದೇಶ ವಿರುದ್ಧ ಆರಂಭವಾದ ಏಕೈಕ ಟೆಸ್ಟ್ ಪಂದ್ಯದಲ್ಲಿ ರಶೀದ್‌ ಖಾನ್‌ ಈ ದಾಖಲೆ ಮಾಡಿದ್ದಾರೆ. 2004ರಲ್ಲಿ ಈ ಸಾಧನೆ ಮಾಡಿದ್ದ ಜಿಂಬಾಬ್ವೆ ತಂಡದ ತಂತೆಂಡಾ ತೈಬು ಅವರ ದಾಖಲೆಯನ್ನು ಇವರು ಮುರಿದರು.

ತೈಬು ಅವರು 20 ವರ್ಷ 358 ದಿನಗಳಲ್ಲಿ ಜಿಂಬಾಂಬ್ವೆ ಟೆಸ್ಟ್‌ ತಂಡವನ್ನು ಮುನ್ನಡೆಸಿದ್ದರು. ಆದರೆ, ರಶೀದ್ ಖಾನ್‌ 20 ವರ್ಷ 350 ದಿನಗಳಲ್ಲಿ ವಯಸ್ಸಿನಲ್ಲಿ ಅಫ್ಘಾನಿಸ್ತಾನ ತಂಡದ ಸಾರಥ್ಯ ವಹಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com