ಧೋನಿ ಅನುಪಸ್ಥಿತಿ ರಿಷಬ್ ಪಂತ್ ಸದುಪಯೋಗಪಡಿಸಿಕೊಳ್ಳಲಿ; ನಾಯಕ ವಿರಾಟ್ ಕೋಹ್ಲಿ

ಮಹೇಂದ್ರ ಸಿಂಗ್ ಧೋನಿ ಅವರ ಅನುಪಸ್ಥಿತಿಯನ್ನು ಉದಯೋನ್ಮುಖ ಕ್ರಿಕೆಟಿಗ ರಿಷಬ್ ಪಂತ್ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

Published: 03rd August 2019 12:00 PM  |   Last Updated: 03rd August 2019 12:44 PM   |  A+A-


MS Dhoni's absence great opportunity for Rishabh Pant to become a consistent performer: Skipper Virat Kohli

ಸಂಗ್ರಹ ಚಿತ್ರ

Posted By : SVN SVN
Source : UNI
ಲಾಡರ್ ಹಿಲ್: ಮಹೇಂದ್ರ ಸಿಂಗ್ ಧೋನಿ ಅವರ ಅನುಪಸ್ಥಿತಿಯನ್ನು ಉದಯೋನ್ಮುಖ ಕ್ರಿಕೆಟಿಗ ರಿಷಬ್ ಪಂತ್ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಎಂಎಸ್ ಧೋನಿ ಗೈರುಹಾಜರಾಗಿರುವ ಹಿನ್ನಲೆಯಲ್ಲಿ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ಅವಕಾಶ ದೊರೆಯಲಿದೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಫ್ಲೋರಿಡಾದಲ್ಲಿ ಶನಿವಾರ, ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟಿ 20 ಪಂದ್ಯಕ್ಕೆ ಸಜ್ಜುಗೊಳ್ಳತ್ತಿರುವಾಗಲೇ ರಿಷಬ್ ಪಂತ್ ಅವರನ್ನು ಕೊಹ್ಲಿ ಪ್ರಶಂಸಿಸಿದ್ದು, ವಿಂಡೀಸ್ ಪ್ರವಾಸದಲ್ಲಿ ತನ್ನ ಪ್ರತಿಭೆ ಪ್ರದರ್ಶಿಸಲು ಅವರಿಗೆ ಉತ್ತಮ ಅವಕಾಶ ದೊರೆಯಲಿದೆ ಎಂದು ಹೇಳಿದ್ದಾರೆ,

ಧೋನಿ, ವಿಂಡೀಸ್ ಪ್ರವಾಸದಿಂದ ಹೊರಗುಳಿದಿರುವ ಕಾರಣ, ರಿಷಬ್ ಪಂತ್ ಅದರ ಲಾಭವನ್ನು ಪಡೆದುಕೊಳ್ಳಬೇಕು. ಪಂತ್ ಪ್ರತಿಭೆ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ, ಪರಿಸ್ಥಿತಿಗೆ ತಕ್ಕಂತೆ ಆತ ಆಡಲಿದ್ದಾನೆ. ಸ್ಥಿರ ಆಟದ ಮೂಲಕ ಪಂತ್ ವಿಂಡೀಸ್ ಪ್ರವಾಸ  ಸದುಪಯೋಗಪಡಿಸಿಕೊಳ್ಳಲಿದ್ದಾರೆ ಎಂದು  ನಾವು ಬಯಸುತ್ತೇವೆ. ಎಂ.ಎಸ್.ಧೋನಿಯ ಅನುಭವ ಯಾವಾಗಲೂ  ತಂಡಕ್ಕೆ ಮಹತ್ವದ್ದು, ಹಾರ್ದಿಕ್ ಪಾಂಡ್ಯ ಕೂಡ ವಿಶ್ರಾಂತಿ ಪಡೆಯುತ್ತಿರುವುದರಿಂದ ಯುವ ಕ್ರಿಕೆಟಿಗರಿಗೆ ಇದೊಂದು ಉತ್ತಮ ಅವಕಾಶ. ಈ ಆಟಗಾರರು ಈ ಇದರ ಲಾಭ ಪಡೆದುಕೊಳ್ಳುವ ಆಶಯ ಇದೆ ಎಂದು ಕೊಹ್ಲಿ ಹೇಳಿದ್ದಾರೆ.
Stay up to date on all the latest ಕ್ರಿಕೆಟ್ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp