ಕ್ರಿಕೆಟ್ ವಿಶ್ವಕಪ್: ಇಂಡೋ-ಪಾಕ್ ಪಂದ್ಯ ವೀಕ್ಷಣೆಗೆ 4 ಲಕ್ಷ ಟಿಕೆಟ್ ಅರ್ಜಿ!

ಪುಲ್ವಾಮ ಉಗ್ರ ದಾಳಿ ಹಿನ್ನಲೆಯಲ್ಲಿ ಮುಂಬರುವ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಪಂದ್ಯಗಳನ್ನು ಭಾರತ ತಂಡ ಬಹಿಷ್ಕರಿಸಬೇಕು ಎಂಬ ವಾದ ಕೇಳಿಬರುತ್ತಿರುವಂತೆಯೇ ಅತ್ತ ಈ ಹೈ ವೋಲ್ಟೇಜ್ ಪಂದ್ಯ ವೀಕ್ಷಣೆಗಾಗಿ ಅಭಿಮಾನಿಗಳು ಮುಗಿ ಬಿದ್ದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಪುಲ್ವಾಮ ಉಗ್ರ ದಾಳಿ ಹಿನ್ನಲೆಯಲ್ಲಿ ಮುಂಬರುವ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಪಂದ್ಯಗಳನ್ನು ಭಾರತ ತಂಡ ಬಹಿಷ್ಕರಿಸಬೇಕು ಎಂಬ ವಾದ ಕೇಳಿಬರುತ್ತಿರುವಂತೆಯೇ ಅತ್ತ ಈ ಹೈ ವೋಲ್ಟೇಜ್ ಪಂದ್ಯ ವೀಕ್ಷಣೆಗಾಗಿ ಅಭಿಮಾನಿಗಳು ಮುಗಿ ಬಿದ್ದಿದ್ದಾರೆ.
ಹೌದು.. ಇಂಗ್ಲೆಂಡ್ ನಲ್ಲಿ ಆರಂಭಗೊಳ್ಳಲಿರುವ ಐಸಿಸಿ ಏಕದಿನ ವಿಶ್ವಕಪ್​ ಸರಣಿ​ಗೆ ಈಗಾಗಲೇ ದಿನಗಣನೇ ಆರಂಭಗೊಂಡಿದ್ದು, ಮಹಾ ಸಮರ ನೋಡಲು ಕ್ರಿಕೆಟ್​ ಪ್ರೇಮಿಗಳು ತುದಿಗಾಲಲ್ಲ ನಿಂತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ವೀಕ್ಷಣೆಗಾಗಿ ಕ್ರೀಡಾಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದು, ಈಗಾಗಲೇ ಪಂದ್ಯಗಳ ಟಿಕೆ್ಟ್ ಗಾಗಿ ಭಾರಿ ಪ್ರಮಾಣದಲ್ಲಿ ಅರ್ಜಿಗಳು ಬರುತ್ತಿವೆ.
ಜೂನ್​​ 16ರಂದು ನಡೆಯಲಿರುವ ಭಾರತ-ಪಾಕಿಸ್ತಾನ ಪಂದ್ಯ ವೀಕ್ಷಣೆಗಾಗಿ ಈ ವರೆಗೂ ಒಟ್ಟು ನಾಲ್ಕು ಲಕ್ಷ ಅರ್ಜಿಗಳು ಬಂದಿವೆ ಎಂದು ವಿಶ್ವಕಪ್​​ ಸರಣಿ ನಿರ್ದೇಶಕ ಸ್ಟೀವ್ ಎಲ್ವೋರ್ತಿ ಹೇಳಿದ್ದಾರೆ. ಈ ಹೈ ವೋಲ್ಟೇಜ್ ಪಂದ್ಯ ಇಂಗ್ಲೆಂಡ್ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆಯಲಿದ್ದು, ಈ ಮೈದಾನದಲ್ಲಿ 25 ಸಾವಿರ ಮಂದಿಯ ಸಾಮರ್ಥವನ್ನು ಮಾತ್ರ ಹೊಂದಿದೆ. ಆದರೆ ಈ ಪಂದ್ಯಕ್ಕಾಗಿ ಬರೊಬ್ಬರಿ 4 ಲಕ್ಷ ಟಿಕೆಟ್ ಅರ್ಜಿಗಳು ಬಂದಿವೆ ಎಂದು ಹೇಳಿದ್ದಾರೆ.
ಅಂತೆಯೇ ಇದು ಕ್ರಿಕೆಟ್​ ಇತಿಹಾಸದಲ್ಲೇ ದಾಖಲಾಗಿರುವ ಅತಿ ದೊಡ್ಡ ಸಂಖ್ಯೆಯಾಗಿದೆ ಎಂದು ಎಲ್ವೋರ್ತಿ ಮಾಹಿತಿ ನೀಡಿದ್ದು,  ಉಳಿದಂತೆ ಇಂಗ್ಲೆಂಡ್​-ಆಸ್ಟ್ರೇಲಿಯಾ ತಂಡಗಳ ನಡುವಿನ ಪಂದ್ಯ ವೀಕ್ಷಣೆಗೆ 2ಲಕ್ಷ 40 ಸಾವಿರ ವೀಕ್ಷಕರು, ಫೈನಲ್​ ಪಂದ್ಯ ನೋಡಲು 2ಲಕ್ಷ 70 ಸಾವಿರ ಕ್ರೀಡಾ ಪ್ರೇಮಿಗಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com