'ಹೆಲೋ ಟಿಮ್ ಪೈನ್ ಸ್ಪೀಕಿಂಗ್': ಸುದ್ದಿಗೋಷ್ಠಿ ವೇಳೆ ಫೋನ್ ರಿಸೀವ್ ಮಾಡಿದ ಆಸಿಸ್ ನಾಯಕ, ವಿಡಿಯೋ ವೈರಲ್

ಟೀಂ ಇಂಡಿಯಾ ವಿರುದ್ಧ ಸ್ಲೆಡ್ಜಿಂಗ್​ ಮೂಲಕ ಸುದ್ದಿಗೆ ಗ್ರಾಸವಾಗಿದ್ದ ಆಸಿಸ್ ನಾಯಕ ಟಿಮ್ ಪೈನ್ ತಮ್ಮ ಹಾಸ್ಯಾತ್ಮಕ ನಡವಳಿಕೆ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.

Published: 05th January 2019 12:00 PM  |   Last Updated: 05th January 2019 12:41 PM   |  A+A-


Tim Paine speaking: Australian captain answers phone call intended for reporter

ಸಂಗ್ರಹ ಚಿತ್ರ

Posted By : SVN SVN
Source : Online Desk
ಸಿಡ್ನಿ: ಟೀಂ ಇಂಡಿಯಾ ವಿರುದ್ಧ ಸ್ಲೆಡ್ಜಿಂಗ್​ ಮೂಲಕ ಸುದ್ದಿಗೆ ಗ್ರಾಸವಾಗಿದ್ದ ಆಸಿಸ್ ನಾಯಕ ಟಿಮ್ ಪೈನ್ ತಮ್ಮ ಹಾಸ್ಯಾತ್ಮಕ ನಡವಳಿಕೆ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.

ಟೀಂ ಇಂಡಿಯಾ ವಿರುದ್ಧದ ನಾಲ್ಕನೆ ಟೆಸ್ಟ್​ ಪಂದ್ಯದ ವೇಳೆ ತಾವೊಬ್ಬ ಸರಳ ಸ್ನೇಹ ಜೀವಿ ಎಂಬುದನ್ನ ಟಿಮ್ ಪೈನ್ ಸಾಬೀತು ಪಡಿಸಿದ್ದು, 4ನೇ ಟೆಸ್ಟ್​ ಪಂದ್ಯದ 2ನೇ ದಿನ ಮುಕ್ತಾಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಪೈನ್​ ಪತ್ರಕರ್ತನ ಫೋನ್ ​ಗೆ ಉತ್ತರ ನೀಡಿದ್ದಾರೆ.

ಟಿಮ್​ ಪೈನ್​ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಅವರ ಮಾತು ರೆಕಾರ್ಡ್​ ಮಾಡಲು ಫೋನ್​ ವೊಂದು ಇರಿಸಲಾಗಿತ್ತು. ಸುದ್ದಿಗೋಷ್ಠಿ ಮಧ್ಯೆ ಅದು ರಿಂಗ್​ ಆಗಲು ಆರಂಭಗೊಂಡಿದೆ. ಈ ವೇಳೆ ಮೊಬೈಲ್​ ಎತ್ತಿಕೊಂಡ ಪೈನ್​, ಯಾರ ಫೋನ್​ ಎಂದು ಪ್ರಶ್ನೆ ಮಾಡಿದ್ರು..  ತದನಂತರ ಕಾಲ್​ ರಿಸೀವ್​ ಮಾಡಿ ಉತ್ತರವನ್ನೂ ನೀಡಿದ್ರು. ಹೆಲೋ ಟಿಮ್ ಪೈಮ್ ಮಾತನಾಡುತ್ತಿದ್ದೇನೆ.. ಯಾರಿದು.. ಯಾರು  ಬೇಕಿತ್ತು ಎಂದು ಕೇಳಿದ್ದಾರೆ. ಅಲ್ಲದೆ ಪ್ರಸ್ತುತ ಸುದ್ದಿಗೋಷ್ಠಿಯಲ್ಲಿದ್ದು ಸುದ್ದಿಗೋಷ್ಠಿ ಬಳಿಕ ಮೇಲ್ ಚೆಕ್ ಮಾಡುವಂತೆ ಹೇಳುತ್ತೇನೆ  ಎಂದು ಉತ್ತರಿಸಿದ್ದಾರೆ,

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp