ಆಸೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು 1983 ವಿಶ್ವಕಪ್ ಗೆಲುವಿಗೆ ಹೋಲಿಕೆ: ರವಿಶಾಸ್ತ್ರಿ ವಿರುದ್ಧ ಮುಗಿಬಿದ್ದ ನೆಟಿಗರು!

71 ವರ್ಷಗಳ ಬಳಿಕ ಆಸ್ಟ್ರೇಲಿಯಾ ನೆಲದಲ್ಲಿ ಕಾಂಗರೂಗಳನ್ನು ಬಗ್ಗು ಬಡಿದು ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದ ಟೀಂ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿದೆ.
ರವಿಶಾಸ್ತ್ರಿ
ರವಿಶಾಸ್ತ್ರಿ
ನವದೆಹಲಿ: 71 ವರ್ಷಗಳ ಬಳಿಕ ಆಸ್ಟ್ರೇಲಿಯಾ ನೆಲದಲ್ಲಿ ಕಾಂಗರೂಗಳನ್ನು ಬಗ್ಗು ಬಡಿದು ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದ ಟೀಂ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿದೆ. ಈ ಮಧ್ಯೆ ಟೀಂ ಇಂಡಿಯಾ ಪ್ರಧಾನ ಕೋಚ್ ರವಿಶಾಸ್ತ್ರಿ ವಿರುದ್ಧ ನೆಟಿಗರು ಮುಗಿಬಿದ್ದಿದ್ದಾರೆ. 
ಟೀಂ ಇಂಡಿಯಾ ಸರಣಿ ಗೆದ್ದ ಬೆನ್ನಲ್ಲೇ ರವಿಶಾಸ್ತ್ರಿ ಟ್ವೀಟ್ ಮಾಡಿದ್ದು 1983ರ ವಿಶ್ವಕಪ್ ದೊಡ್ಡದು, 1985ರ ವಿಶ್ವ ಚಾಂಪಿಯನ್ ಶಿಪ್ ದೊಡ್ಡದು, 2019ರ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ದೊಡ್ಡದಾಗದಿದ್ದರೂ, ಅದು ಕಠಿಣ ಸ್ವರೂಪದಲ್ಲಿ ಬಂದಿರುವುದರಿಂದ ಇದು ದೊಡ್ಡದಾಗಿದೆ ಎಂದು ಟ್ವೀಟಿಸಿದ್ದರು. ಇದಕ್ಕೆ ನೆಟಿಗರು ಕೆಂಡಾಮಂಡಲರಾಗಿದ್ದಾರೆ.
ನಿಮ್ಮ ಮಾತಿನ ಅರ್ಥದಲ್ಲಿ 2007, 2011, 2013ರ ಟ್ರೋಫಿ ಗೆಲುವು ದೊಡ್ಡದಲ್ಲವ ಎಂದು ರವಿಶಾಸ್ತ್ರಿಯನ್ನು ಛಾಡಿಸಿದ್ದಾರೆ. ಮತ್ತೊಬ್ಬರು ಸ್ಟೀವನ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಇಲ್ಲದ ಆಸ್ಟ್ರೇಲಿಯಾ 'ಬಿ' ತಂಡದಂತಿರುವವರ ವಿರುದ್ಧ ಗೆದ್ದಿರುವುದನ್ನೇ ನಿಮ್ಮ ಸಾಧನೆ ಎಂದು ತೆಗಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com