ಕಮ್ ಬ್ಯಾಕ್ ಪಂದ್ಯದಲ್ಲಿ ಪಾಂಡ್ಯ ಹಿಡಿದ ಅದ್ಭುತ ಕ್ಯಾಚ್ ಗೆ ಕಿವೀಸ್ ನಾಯಕ ವಿಲಿಯಮ್ಸನ್ ಬಲಿ!

ನ್ಯೂಜಿಲೆಂಡ್ ವಿರುದ್ಧದ ಮೂರನೇ ಪಂದ್ಯದಲ್ಲೂ ಭಾರತೀಯ ಆಟಗಾರರ ಪಾರಮ್ಯ ಮುಂದುವರೆದಿದ್ದು, ಅಸಭ್ಯ ಹೇಳಿಕೆ ನೀಡಿ ನಿಷೇಧ ಶಿಕ್ಷೆಗೆ ತುತ್ತಾಗಿದ್ದ ಹಾರ್ದಿಕ್ ಪಾಂಡ್ಯಾ ಭರ್ಜರಿಯಾಗಿ ಕಮ್ ಬ್ಯಾಕ್ ಮಾಡಿದ್ದಾರೆ.
ಪಾಂಡ್ಯಾ ಅಧ್ಬುತ ಕ್ಯಾಚ್
ಪಾಂಡ್ಯಾ ಅಧ್ಬುತ ಕ್ಯಾಚ್
ಬೇ ಓವಲ್: ನ್ಯೂಜಿಲೆಂಡ್ ವಿರುದ್ಧದ ಮೂರನೇ ಪಂದ್ಯದಲ್ಲೂ ಭಾರತೀಯ ಆಟಗಾರರ ಪಾರಮ್ಯ ಮುಂದುವರೆದಿದ್ದು, ಅಸಭ್ಯ ಹೇಳಿಕೆ ನೀಡಿ ನಿಷೇಧ ಶಿಕ್ಷೆಗೆ ತುತ್ತಾಗಿದ್ದ ಹಾರ್ದಿಕ್ ಪಾಂಡ್ಯಾ ಭರ್ಜರಿಯಾಗಿ ಕಮ್ ಬ್ಯಾಕ್ ಮಾಡಿದ್ದಾರೆ.

ಆದರೆ ಪಾಂಡ್ಯಾ ಕಮ್ ಬ್ಯಾಕ್ ಮಾಡಿರುವುದು ಬೌಲಿಂಗ್ ಅಥವಾ ಬ್ಯಾಟಿಂಗ್ ನಿಂದಲ್ಲ. ಬದಲಿಗೆ ಫೀಲ್ಡಿಂಗ್ ನಿಂದ. ಹೌದು.. ಹಾರ್ದಿಕ್ ಪಾಂಡ್ಯಾ ಮಾಡಿದ ಮ್ಯಾಜಿಕಲ್ ಫೀಲ್ಡಿಂಗ್ ನಿಂದಾಗಿ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ತಮ್ಮ ವಿಕೆಟ್ ಕೈ ಚೆಲ್ಲಿದ್ದಾರೆ.

ಯಜುವೇಂದ್ರ ಚಾಹಲ್ ಎಸೆದ ಇನ್ನಿಂಗ್ಸ್ ನ 17ನೇ ಓವರ್ 2ನೇ ಎಸೆತದಲ್ಲಿ ಭರ್ಜರಿ ಬೌಂಡರಿಗೆ ಮುಂದಾದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್, ಫ್ಲಿಕ್ ಮಾಡಿದರು. ಆದರೆ ಮಿಡ್ ವಿಕೆಟ್ ನಲ್ಲಿ ನಿಂತಿದ್ದ ಪಾಂಡ್ಯಾ ಗಾಳಿಯಲ್ಲಿ ಹಾರಿ ಅದ್ಬುತವಾಗಿ ಕ್ಯಾಚ್ ಪಡೆದರು. ಆ ಮೂಲಕ 28 ರನ್ ಗಳಿಸಿದ್ದ ವಿಲಿಯಮ್ಸನ್ ನಿರಾಸೆಯಿಂದ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು.
ಇನ್ನು ಬಳಿಕ ಬಂದ ರಾಸ್ ಟೇಲರ್ ಮತ್ತು ಲಾಥಮ್ ಕಿವೀಸ್ ಬ್ಯಾಟಿಂಗ್ ಬಲ ತುಂಬಿದ್ದು, ಇತ್ತೀಚಿನ ವರದಿಗಳ ಬಂದಾಗ ಕಿವೀಸ್ ಪಡೆ 42 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿದೆ. ಕಿವೀಸ್ ಪರ ರಾಸ್ ಟೇಲರ್ ಅಜೇಯ 81 ರನ್ ಗಳಿಸಿ ಶತಕದತ್ತ ದಾಪುಗಾಲಿರಿಸಿದ್ದು, ಅರ್ಧಶತಕ ಗಳಿಸಿದ್ದ ಲಾಥಮ್ ಪಾಂಡ್ಯಾ ಬೌಲಿಂಗ್ ನಲ್ಲಿ ಔಟ್ ಆಗಿದ್ದಾರೆ. ಭಾರತದ ಪರ ಹಾರ್ದಿಕ್ ಪಾಂಡ್ಯಾ ಮತ್ತು ಯಜುವೇಂದ್ರ ಚಾಹಲ್ ತಲಾ 2 ವಿಕೆಟ್ ಪಡೆದಿದ್ದು, ಭುವನೇಶ್ವರ್ ಕುಮಾರ್ ಮತ್ತು ಮಹಮದ್ ಶಮಿ ತಲಾ 1 ವಿಕೆಟ್ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com