ಇಂಡೋ-ಪಾಕ್ ಹೈ ವೋಲ್ಟೇಜ್ ಕದನ: ಉಚಿತ ಪಾಸ್ ಗಳಿಗೆ ದುಂಬಾಲು ಬಿದ್ದ ಸ್ನೇಹಿತರಿಗೆ ಕೊಹ್ಲಿ ಕೊಟ್ಟ ಉತ್ತರ ಹೇಗಿತ್ತು ಗೊತ್ತಾ?

ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯಕ್ಕೆ ಯಾವ ಮಟ್ಟಿಗಿನ ಕ್ರೇಜ್ ಸೃಷ್ಟಿಯಾಗಿದೆ ಎಂದರೆ ನಾಯಕ ಕೊಹ್ಲಿಗೂ ಉಚಿತ ಪಾಸ್ ಹಾಗೂ ಟಿಕೆಟ್ ಬಿಸಿ ಮುಟ್ಟಿದೆ.

Published: 16th June 2019 12:00 PM  |   Last Updated: 16th June 2019 12:04 PM   |  A+A-


Watch: India vs Pakistan: Virat Kohli has a hilarious message for people asking for Ind-Pak match passes

ಸಂಗ್ರಹ ಚಿತ್ರ

Posted By : SVN SVN
Source : Online Desk
ಲಂಡನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯಕ್ಕೆ ಯಾವ ಮಟ್ಟಿಗಿನ ಕ್ರೇಜ್ ಸೃಷ್ಟಿಯಾಗಿದೆ ಎಂದರೆ ನಾಯಕ ಕೊಹ್ಲಿಗೂ ಉಚಿತ ಪಾಸ್ ಹಾಗೂ ಟಿಕೆಟ್ ಬಿಸಿ ಮುಟ್ಟಿದೆ.

ಭಾರತ ಹಾಗೂ ಪಾಕಿಸ್ತಾನ ಪಂದ್ಯ ವೀಕ್ಷಿಸಲು ಈಗಾಗಲೇ ಟೀಂ ಇಂಡಿಯಾ ಅಭಿಮಾನಿಗಳು ಇಂಗ್ಲೆಂಡ್‌ಗೆ ತೆರಳಿದ್ದಾರೆ. ಹಲವರಿಗೆ ಪಂದ್ಯದ ಟಿಕೆಟ್ ಸಿಗದ ಕಾರಣ ನಿರಾಸೆ ಅನುಭವಿಸಿದ್ದಾರೆ. ಆದರೆ ಸ್ವತಃ ನಾಯಕ ವಿರಾಟ್ ಕೊಹ್ಲಿಗೂ ಪಂದ್ಯದ ಪಾಸ್ ಗಳ ಅಭಾವದ ಬಿಸಿ ತಟ್ಟಿದೆ. ಈ ಕುರಿತು ನಾಯಕ ವಿರಾಟ್ ಕೊಹ್ಲಿ ಮನವಿ ಮಾಡಿದ್ದು, ಪಂದ್ಯ ನೋಡಲು ಬನ್ನಿ ಆದರೆ ಪಾಸ್ ಮಾತ್ರ ಕೇಳಬೇಡಿ ಎಂದಿದ್ದಾರೆ.

ಪಾಕಿಸ್ತಾನ ವಿರುದ್ದದ ಪಂದ್ಯಕ್ಕೂ ಮುನ್ನ ನಡೆದ ನಡೆದ ಸುದ್ದಿಗೋಷ್ಠಿಯಲ್ಲಿ ಕೊಹ್ಲಿ ಟಿಕೆಟ್ ಕುರಿತು ಕೆಲ ಮಹತ್ವದ ವಿಚಾರ ತಿಳಿಸಿದ್ದಾರೆ. ಪ್ರತಿಷ್ಠಿತ  ಟೂರ್ನಿಗೆ ತೆರಳೋ ಮುನ್ನ ಪಂದ್ಯದ ಪಾಕ್ ಸಿಗುವುದಿಲ್ಲ ಎಂದು ಗೆಳೆಯರ ಬಳಿ ಸ್ಪಷ್ಟವಾಗಿ ಹೇಳಿರಬೇಕು ಎಂದು ಕೊಹ್ಲಿ ಹೇಳಿದ್ದಾರೆ. ನನ್ನ ಗೆಳೆಯರು ಫೋನ್ ಮೂಲಕ ಮಾತನಾಡಿದ್ದರು. ನಾವು ಪಂದ್ಯ ನೋಡಲು ಬರುತ್ತೇವೆ ಎಂದರು. ಪಂದ್ಯ ವೀಕ್ಷಿಸಲು ಬನ್ನಿ, ಅದಕ್ಕೆ ನನ್ನಲ್ಲಿ ಕೇಳಬೇಕಾಗಿಲ್ಲ. ಎಲ್ಲರ ಮನೆಯಲ್ಲಿ ಟಿವಿ ಇದೆ, ಆರಾಮವಾಗಿ ಟಿವಿಯಲ್ಲಿ ಪಂದ್ಯ ನೋಡಿ. ಆದರೆ ಪಾಸ್ ಮಾತ್ರ ಇಲ್ಲ ಎಂದಿದ್ದಾರೆ.

ಇಷ್ಟೇ ಅಲ್ಲ, ನೀವು ಒಂದು ಬಾರಿ ಟಿಕೆಟ್ ಹೊಂದಿಸಿದರೆ ಅದಕ್ಕೆ ಅಂತ್ಯವಿರುವುದಿಲ್ಲ. ಕಾರಣ ಈ ಟೂರ್ನಿಗಳಲ್ಲಿ ನಮಗೆ ನಿಗದಿತ ಟಿಕೆಟ್ ಸಿಗುತ್ತದೆ. ಕುಟುಂಬಸ್ಥರಿಗೆ ನಾವು ಪಾಸ್ ನೀಡಬೇಕಾಗುತ್ತೆ. ಹೀಗಾಗಿ ಇತರರಿಗೆ ಪಾಸ್ ನೀಡಲು ಸಾಧ್ಯವಾಗುವುದಿಲ್ಲ. ಟಿಕೆಟ್ ಖರೀದಿಸಿ ಪಂದ್ಯ ವೀಕ್ಷಿಸಿದರೆ ಉತ್ತಮ. ಆದರೆ ಫ್ರೀ ಪಾಸ್ ಕೇಳದಿದ್ದರೆ ಸಾಕು ಎಂದು ಮನವಿ ಮಾಡಿದ್ದಾರೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp