ವಿಡಿಯೋ: ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಪಾಕ್ 7ನೇ ಐತಿಹಾಸಿಕ ಸೋಲಿಗೆ ಕಾರಣಗಳಿವು?

ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಪಾಕ್ ವಿರುದ್ಧ ಗೆದ್ದು 7ನೇ ಐತಿಹಾಸಿಕ ದಾಖಲೆ ಬರೆದಿದೆ. ಟೀಂ ಇಂಡಿಯಾ 86 ರನ್ ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಇನ್ನು ಭಾರತ ವಿರುದ್ಧ ತೀವ್ರ ಮುಖಭಂಗಕ್ಕೀಡಾಗಿರುವ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಪಾಕ್ ವಿರುದ್ಧ ಗೆದ್ದು 7ನೇ ಐತಿಹಾಸಿಕ ದಾಖಲೆ ಬರೆದಿದೆ. ಟೀಂ ಇಂಡಿಯಾ 86 ರನ್ ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಇನ್ನು ಭಾರತ ವಿರುದ್ಧ ತೀವ್ರ ಮುಖಭಂಗಕ್ಕೀಡಾಗಿರುವ ಪಾಕ್ ಸೋಲಿಗೆ ಕೆಲ ಮಹತ್ವದ ಕಾರಣಗಳು ಇಲ್ಲಿವೆ. 
ಕಾರಣಗಳು:
* ಫೀಲ್ಡಿಂಗ್ ವೈಫಲ್ಯ
ಪಾಕ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ 140 ರನ್ ಬಾರಿಸಿ ತಂಡಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟರು. ಆದರೆ ರೋಹಿತ್ ಶರ್ಮಾ ಅವರು 32 ರನ್ ಗಳಿಸಿದ್ದಾಗ ಸುಲಭವಾಗಿ ರನ್ ಔಟ್ ಆಗುವ ಸಾಧ್ಯತೆ ಇತ್ತು. ಆದರೆ ಪಾಕಿಸ್ತಾನದ ಫೀಲ್ಡರ್ ಫಕಾರ್ ಜಮಾನ್ ರಾಂಗ್ ಸೈಡ್ ನಲ್ಲಿ ಥ್ರೋ ಮಾಡಿದ್ದು ಮೊದಲ ಕಾರಣವಾಗಿದೆ.
* ಮಧ್ಯ ಕ್ರಮಾಂಕದ ಪತನ
ಪಾಕಿಸ್ತಾನ ಮೊದಲ ವಿಕೆಟ್ ಪತನದ ಬಳಿಕ ಫಕರ್ ಜಮಾನ್ ಮತ್ತು ಬಾಬರ್ ಅಜಾಮ್ ಅದ್ಭುತ ಬ್ಯಾಟಿಂಗ್ ಮಾಡಿ 104 ರನ್ ಜೊತೆಯಾಟ ನೀಡಿದರು. ಇಂತಹ ಸುಸ್ಥಿತಿಯಲ್ಲಿದ್ದಾಗ ಟೀಂ ಇಂಡಿಯಾದ ಸ್ಪಿನ್ ಮಾಂತ್ರಿಕ ಕುಲದೀಪ್ ಯಾದವ್ ಬಾಬರ್ ಅಜಾಮ್ ರನ್ನು ಕ್ಲೀನ್ ಬೌಲ್ಡ್ ಮಾಡಿದರು. ನಂತರ ಫಕರ್ ಜಮಾನ್, ಮೊಹಮ್ಮದ್ ಹಫೀಜ್, ಶೋಯಬ್ ಮಲಿಕ್ ಔಟ್ ಆಗಿ ಪೆಲಿವಿಲಿಯನ್ ಸೇರಿದರು ಇದು ಪಾಕಿಗೆ ಮತ್ತೊಂದು ದೊಡ್ಡ ಹೊಡೆತವಾಗಿದೆ.
* ಕಳಪೆ ಬೌಲಿಂಗ್
ಟೀಂ ಇಂಡಿಯಾ ವಿರುದ್ಧ ಆರಂಭಿಕ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಪಾಕ್ ಬೌಲರ್ ಗಳು ನಂತರ ಠುಸ್ ಆದರು. ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್ ಮನ್ ಗಳಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ 136 ರನ್ ಗಳ ಜೊತೆಯಾಟವಾಡಿದರು. ಈ ವೇಳೆ ಪಾಕ್ ಬೌಲರ್ ಗಳು ಠುಸ್ಸಾಗಿದ್ದರಿಂದ ನಂತರ ಬಂದ ಹಾರ್ದಿಕ್ ಪಾಂಡ್ಯ ಮತ್ತು ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ತಂಡದ ಮೊತ್ತ300ರ ಗಡಿ ದಾಟಲು ಸಹಕಾರಿಯಾದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com