ಕೊಹ್ಲಿ ದಾಖಲೆ ಹಿಂದೆ ಬಿದ್ದ ಹಾಶೀಂ ಆಮ್ಲಾ, ಈ ಒಂದು 'ಮೈಲಿಗಲ್ಲು' ಮುರಿಯಲು ಆಗಿಲ್ಲ!

ಕ್ರಿಕೆಟ್ ನಲ್ಲಿ ಹಳೆಯ ದಾಖಲೆಗಳನ್ನು ಧೂಳಿಪಟ ಮಾಡಿ ಹೊಸ ದಾಖಲೆಗಳನ್ನು ಸೃಷ್ಠಿಸುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ದಾಖಲೆಗಳ ಹಿಂದೆ ಬಿದ್ದಿದ್ದ...
ವಿರಾಟ್ ಕೊಹ್ಲಿ-ಹಾಶೀಂ ಆಮ್ಲಾ
ವಿರಾಟ್ ಕೊಹ್ಲಿ-ಹಾಶೀಂ ಆಮ್ಲಾ
ಕ್ರಿಕೆಟ್ ನಲ್ಲಿ ಹಳೆಯ ದಾಖಲೆಗಳನ್ನು ಧೂಳಿಪಟ ಮಾಡಿ ಹೊಸ ದಾಖಲೆಗಳನ್ನು ಸೃಷ್ಠಿಸುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ದಾಖಲೆಗಳ ಹಿಂದೆ ಬಿದ್ದಿದ್ದ ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮನ್ ಹಾಶೀಂ ಆಮ್ಲಾ ಕೊನೆಗೂ ಈ ಒಂದು ದಾಖಲೆಯನ್ನು ಮುರಿಯುವಲ್ಲಿ ವಿಫಲರಾಗಿದ್ದಾರೆ.
ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ಹಾಶೀಂ ಆಮ್ಲಾ ಮತ್ತೊಂದು ಮೈಲಿಗಲ್ಲು ದಾಟಿದ್ದಾರೆ. ಅತ್ಯಂತ ವೇಗವಾಗಿ 8 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ ಎರಡನೇ ಆಟಗಾರ ಎಂಬ ಖ್ಯಾತಿಗೆ ಆಮ್ಲಾ ಭಾಜನರಾಗಿದ್ದಾರೆ.
ವಿಶ್ವಕಪ್ ಟೂರ್ನಿಯ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಹಾಶೀಂ ಆಮ್ಲಾ 38ನೇ ಅರ್ಧ ಶತಕ ಪೂರೈಸಿ 8 ಸಾವಿರ ರನ್ ಗಡಿ ದಾಟಿದರು. ಈ ದಾಖಲೆ ಮಾಡಲು ಆಮ್ಲಾ 176 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. ಆದರೆ ವಿರಾಟ್ ಕೊಹ್ಲಿ 175ನೇ ಇನ್ನಿಂಗ್ಸ್ ನಲ್ಲಿ ಈ ದಾಖಲೆ ಮಾಡಿದ್ದರಿಂದ ಅಗ್ರಜರಾಗಿ ಉಳಿದ್ದಾರೆ.
ಅತೀ ವೇಗವಾಗಿ 8 ಸಾವಿರ ರನ್ ಪೂರೈಸಿದ ಆಟಗಾರರು
* ವಿರಾಟ್ ಕೊಹ್ಲಿ(ಟೀಂ ಇಂಡಿಯಾ) 183 ಪಂದ್ಯ-175 ಇನ್ನಿಂಗ್ಸ್
* ಹಾಶೀಂ ಆಮ್ಲಾ(ದಕ್ಷಿಣ ಆಫ್ರಿಕಾ) 179 ಪಂದ್ಯ-176 ಇನ್ನಿಂಗ್ಸ್
* ಎಬಿ ಡಿವಿಲಿಯರ್ಸ್(ದಕ್ಷಿಣ ಆಫ್ರಿಕಾ) 190 ಪಂದ್ಯ-182 ಇನ್ನಿಂಗ್ಸ್
* ಸೌರವ್ ಗಂಗೂಲಿ(ಟೀಂ ಇಂಡಿಯಾ) 208 ಪಂದ್ಯ-200 ಇನ್ನಿಂಗ್ಸ್
* ರೋಹಿತ್ ಶರ್ಮಾ(ಟೀಂ ಇಂಡಿಯಾ) 206 ಪಂದ್ಯ-200 ಇನ್ನಿಂಗ್ಸ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com