ಫಾಲೋ ಆನ್ ಹೇರಿಕೆಯಲ್ಲೂ ಕ್ಯಾಪ್ಟನ್ ಕೊಹ್ಲಿ ದಾಖಲೆ!

ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಎರಡು ಬಾರಿ ಫಾಲೋ ಆನ್ ಹೇರುವ ಮೂಲಕ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಪರೂಪದ ದಾಖಲೆ ನಿರ್ಮಾಣ ಮಾಡಿದ್ದಾರೆ.
ದಾಖಲೆ ಬರೆದ ಕ್ಯಾಪ್ಟನ್ ಕೊಹ್ಲಿ
ದಾಖಲೆ ಬರೆದ ಕ್ಯಾಪ್ಟನ್ ಕೊಹ್ಲಿ

ರಾಂಚಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಎರಡು ಬಾರಿ ಫಾಲೋ ಆನ್ ಹೇರುವ ಮೂಲಕ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಪರೂಪದ ದಾಖಲೆ ನಿರ್ಮಾಣ ಮಾಡಿದ್ದಾರೆ.

ರಾಂಚಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾ ತಂಡ ಕೇವಲ 162 ರನ್ ಗಳಿಗೆ ಆಲೌಟ್ ಆಗಿದ್ದು, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸತತ 2ನೇ ಬಾರಿಗೆ ಆಫ್ರಿಕಾ ಮೇಲೆ ಫಾಲೋ ಆನ್ ಹೇರುವ ಮೂಲಕ ದಾಖಲೆಯೊಂದನ್ನು ಬರೆದಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಒಟ್ಟು 8 ಬಾರಿ ಫಾಲೋ ಆನ್ ಹೇರಿಕೆ ಮಾಡಿದೆ. ಆ ಮೂಲಕ ಎದುರಾಳಿ ತಂಡದ ಮೇಲೆ ಅತೀ ಹೆಚ್ಚು ಬಾರಿ ಫಾಲೋ ಆನ್ ಹೇರಿದ ನಾಯಕ ಎಂಬ ಕೀರ್ತಿಗೆ ಕೊಹ್ಲಿ ಭಾಜನರಾಗಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಮಾಜಿ ನಾಯಕ ಮಹಮದ್ ಅಜರುದ್ದೀನ್ ಅವರ ಹೆಸರಲ್ಲಿತ್ತು. ಅಜರುದ್ದೀನ್ ಒಟ್ಟು 7 ಬಾರಿ ಫಾಲೋ ಆನ್ ಹೇರಿದ್ದರು. ಇದು ಈ ವರೆಗಿನ ದಾಖಲೆಯಾಗಿತ್ತು. ಆದರೆ ಇದೀಗ ಕೊಹ್ಲಿ 8ನೇ ಬಾರಿಗೆ ಫಾಲೋ ಆನ್ ಹೇರುವ ಮೂಲಕ ಈ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಅಲ್ಲದೆ ಕೊಹ್ಲಿ ಒಂದೇ ಟೂರ್ನಿಯಲ್ಲಿ ಆಫ್ರಿಕಾ ಮೇಲೆ 2 ಬಾರಿ ಫಾಲೋ ಆನ್ ಹೇರಿದ ದಾಖಲೆ ಕೂಡ ಬರೆದಿದ್ದು, ಈ ಹಿಂದೆ 1993-94ರಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಭಾರತ ಒಂದೇ ಟೂರ್ನಿಯಲ್ಲಿ 2 ಬಾರಿ (ಲಖನೌ ಮತ್ತು ಬೆಂಗಳೂರು ಪಂದ್ಯ)ಫಾಲೋ ಆನ್ ಹೇರಿತ್ತು. 

ಇನ್ನು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 5 ಬಾರಿ ಮತ್ತು ಕ್ರಿಕೆಟ್ ದಂತಕಥೆ ಸೌರವ್ ಗಂಗೂಲಿ 4 ಬಾರಿ ಫಾಲೋ ಆನ್ ಹೇರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com