ಡಾನ್ ಬ್ರಾಡ್ಮನ್ ರ 71 ವರ್ಷಗಳ ಹಳೆಯ ದಾಖಲೆ ಕೊನೆಗೂ ನುಚ್ಚು ನೂರು ಮಾಡಿದ 'ಹಿಟ್ ಮ್ಯಾನ್' ರೋಹಿತ್

ಡಾನ್ ಬ್ರಾಡ್ಮನ್ ರ 71 ವರ್ಷಗಳ ಹಳೆಯ ಮತ್ತು ಅಪರೂಪದ ದಾಖಲೆಯೊಂದನ್ನು ಭಾರತ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ನುಚ್ಚುನೂರು ಮಾಡಿದ್ದಾರೆ.
ರೋಹಿತ್ ಶರ್ಮಾ-ಡಾನ್ ಬ್ರಾಡ್ಮನ್
ರೋಹಿತ್ ಶರ್ಮಾ-ಡಾನ್ ಬ್ರಾಡ್ಮನ್

ರಾಂಚಿ: ಡಾನ್ ಬ್ರಾಡ್ಮನ್ ರ 71 ವರ್ಷಗಳ ಹಳೆಯ ಮತ್ತು ಅಪರೂಪದ ದಾಖಲೆಯೊಂದನ್ನು ಭಾರತ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ನುಚ್ಚುನೂರು ಮಾಡಿದ್ದಾರೆ.

ಹೌದು.. ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವ ರೋಹಿತ್ ಶರ್ಮಾ, ಡಾನ್ ಬ್ರಾಡ್ಮನ್ ರ ಅಪರೂಪದ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಹಾಲಿ ಟೆಸ್ಟ್ ಸರಣಿಯಲ್ಲಿ 2 ಶತಕ ಹಾಗೂ ಒಂದು ದ್ವಿಶತಕ ಭಾರಿಸಿರುವ ರೋಹಿತ್ ಶರ್ಮಾ ಡಾನ್ ಬ್ರಾಡ್ಮನ್ ರ ಅತ್ಯಂತ ಗರಿಷ್ಠ ಬ್ಯಾಟಿಂಗ್ ಸರಾಸರಿ ದಾಖಲೆಯನ್ನು ನುಚ್ಚುನೂರು ಮಾಡಿದ್ದಾರೆ.

ತವರಿನಲ್ಲಿ ನಡೆದ ಸರಣಿಯಲ್ಲಿ 10ಕ್ಕೂ ಹೆಚ್ಚು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಗರಿಷ್ಠ ಬ್ಯಾಟಿಂಗ್ ಸರಾಸರಿ ಕೂಡ ಹೊಂದಿದ್ದಾರೆ.  ಹಾಲಿ ಟೂರ್ನಿಯಲ್ಲಿ ರೋಹಿತ್ ಶರ್ಮಾ 99.84 ಬ್ಯಾಟಿಂಗ್ ಸರಾಸರಿ ಹೊಂದುವ ಮೂಲಕ ಈ ದಾಖಲೆಯನ್ನು ನಿರ್ಮಾಣ ಮಾಡಿದ್ದಾರೆ. ತವರಿನಲ್ಲಿ ನಡೆದ ಕಳೆದ 18 ಇನ್ನಿಂಗ್ಸ್ ಗಳಲ್ಲಿ ರೋಹಿತ್ ಶರ್ಮಾ 1,298 ರನ್ ಗಳಿಸಿದ್ದು, ಈ ಪೈಕಿ ಆರು ಶತಕ, ಐದು ಅರ್ಧಶತಕ ಕೂಡ ಸೇರಿವೆ.

ಇದೇ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಪಂದ್ಯದಲ್ಲಿ ರೋಹಿತ್ ಶರ್ಮಾ ದ್ವಿಶತಕ ಸಿಡಿಸುವ ಮೂಲಕ ದ್ವಿಶತಕ ಸಿಡಿಸಿದ ನಾಲ್ಕನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದರು. ಈ ಪಟ್ಟಿಯಲ್ಲಿ ಕ್ರಿಕೆಟ್ ದಂತಕಥೆಗಳಾದ ಸಚಿನ್, ಸೆಹ್ವಾಗ್ ಮತ್ತು ಕ್ರಿಸ್ ಗೇಯ್ಲ್ ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com