ಯಾರು ಶ್ರೇಷ್ಠರಲ್ಲ, ಕೊಹ್ಲಿಯಲ್ಲೂ ನ್ಯೂನತೆಗಳಿವೆ: ಮೊಹಮ್ಮದ್ ಶಮಿ

ಕಳೆದ ವರ್ಷ ವಿಶ್ವಕಪ್‌ ಟೂರ್ನಿಯಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದ ಸಾಧನೆ ಮಾಡಿದ ಭಾರತ ತಂಡದ ಸ್ಟಾರ್‌ ವೇಗದ ಬೌಲರ್‌ ಮೊಹಮ್ಮದ್‌ ಶಮಿ, ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ವಿಕೆಟ್‌ ಪಡೆಯಲು ತಾವು ಬಳಸುವ ತಂತ್ರ ಏನೆಂಬುದನ್ನು ಬಹಿರಂಗಪಡಿಸಿದ್ದಾರೆ.
ಮೊಹಮ್ಮದ್ ಶಮಿ-ಕೊಹ್ಲಿ
ಮೊಹಮ್ಮದ್ ಶಮಿ-ಕೊಹ್ಲಿ
Updated on: 

ನವದೆಹಲಿ: ಕಳೆದ ವರ್ಷ ವಿಶ್ವಕಪ್‌ ಟೂರ್ನಿಯಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದ ಸಾಧನೆ ಮಾಡಿದ ಭಾರತ ತಂಡದ ಸ್ಟಾರ್‌ ವೇಗದ ಬೌಲರ್‌ ಮೊಹಮ್ಮದ್‌ ಶಮಿ, ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ವಿಕೆಟ್‌ ಪಡೆಯಲು ತಾವು ಬಳಸುವ ತಂತ್ರ ಏನೆಂಬುದನ್ನು ಬಹಿರಂಗಪಡಿಸಿದ್ದಾರೆ.

ಟೀಂ ಇಂಡಿಯಾ ನೆಟ್ಸ್‌ನಲ್ಲಿ ವಿರಾಟ್‌ ಕೊಹ್ಲಿ ಎದುರು ಲೆಕ್ಕವಿಲ್ಲದಷ್ಟು ಓವರ್‌ಗಳನ್ನು ಎಸೆದಿರುವ ಶಮಿ, ಕಿಂಗ್‌ ಕೊಹ್ಲಿಯ ಸಾಮರ್ಥ್ಯ ಮತ್ತು ದೌರ್ಬಲ್ಯ ಎರಡನ್ನೂ ಚೆನ್ನಾಗಿ ಅರಿತುಕೊಂಡಿರುವುದಾಗಿ ಹೇಳಿದ್ದಾರೆ.
 
ಒಬ್ಬ ಆಟಗಾರನ ಜತೆಗೆ ಗುಣಮಟ್ಟದ ಸಮಯವನ್ನು ನೀವು ಕಳೆದಾಗ ಆತನ ಬಗ್ಗೆ ಸಾಕಷ್ಟು ವಿಚಾರಗಳು ನಿಮಗೆ ತಿಳಿದಿರುತ್ತದೆ. ಅವರ ಬಲವಷ್ಟೇ ನಿಮಗೆ ತಿಳಿಯುವುದಿಲ್ಲ. ದೌರ್ಬಲ್ಯ ಏನೆಂಬುದು ಕೂಡ ಅರ್ಥವಾಗಿರುತ್ತದೆ. ಒಬ್ಬ ಬೌಲರ್‌ ಆಗಿ ನೀವು ಆ ಕಡೆಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com