ಭಾರತದ 'ದಿ ವಾಲ್' ಖ್ಯಾತಿಯ ದ್ರಾವಿಡ್ ಮುಂದೆ ನಾನು 11 ವರ್ಷದ ಮಗುವಿನಂತಾಗಿದ್ದೆ: ಗ್ರೇಮ್ ಸ್ವಾನ್

ಭಾರತೀಯ ಕ್ರಿಕೆಟ್ ದಿಗ್ಗಜರ ಪೈಕಿ ಒಬ್ಬರಾಗಿರುವ ಮಿಸ್ಟರ್ ಡಿಪೆಂಡಬಲ್ ರಾಹುಲ್ ದ್ರಾವಿಡ್ ಬಗ್ಗೆ ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ಪ್ರಶಂಸೆಯ ಮಳೆಯನ್ನೇ ಸುರಿಸಿದ್ದಾರೆ.
ಗ್ರೇಮ್ ಸ್ವಾನ್-ದ್ರಾವಿಡ್
ಗ್ರೇಮ್ ಸ್ವಾನ್-ದ್ರಾವಿಡ್
Updated on: 

ಲಂಡನ್: ಭಾರತೀಯ ಕ್ರಿಕೆಟ್ ದಿಗ್ಗಜರ ಪೈಕಿ ಒಬ್ಬರಾಗಿರುವ ಮಿಸ್ಟರ್ ಡಿಪೆಂಡಬಲ್ ರಾಹುಲ್ ದ್ರಾವಿಡ್ ಬಗ್ಗೆ ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ಪ್ರಶಂಸೆಯ ಮಳೆಯನ್ನೇ ಸುರಿಸಿದ್ದಾರೆ.

ತಮ್ಮ ಕ್ರೀಡಾ ಜೀವನದಲ್ಲಿ ದ್ರಾವಿಡ್  ಅವರನ್ನು ಮೀರಿದ ಅತ್ಯುತ್ತಮ ಕ್ರೀಡಾಪಟುವನ್ನು ತಾವು ನೋಡಿಲ್ಲ ಎಂದು ಸಂದರ್ಶನವೊಂದರಲ್ಲಿ ಎಂದು ಹೇಳಿದ್ದಾರೆ.

ರಾಹುಲ್ ದ್ರಾವಿಡ್ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್. ನಾನು ಅವರಿಗೆ  ಕೌಂಟಿ ಪಂದ್ಯಗಳಲ್ಲಿ ಬೌಲ್ ಮಾಡಿದ್ದೇನೆ. ಅವರು ಬ್ಯಾಟಿಂಗ್ ಮಾಡುತ್ತಿದ್ದರೆ, ನಾನು 11 ವರ್ಷದ ಸ್ಪಿನ್ನರ್ ಎಂದು ಭಾಸವಾಗುತ್ತಿತ್ತು ಎಂದು ಸ್ವಾನ್ ಹೇಳಿದ್ದಾರೆ.

ಗ್ರೇಮ್ ಸ್ವಾನ್ ಇಂಗ್ಲೆಡ್ ಪರ 60 ಟೆಸ್ಟ್ ಪಂದ್ಯವಾಡಿದ್ದು 255 ವಿಕೆಟ್ ಗಳನ್ನು ಪಡೆದಿದ್ದಾರೆ. 79 ಏಕದಿನ ಪಂದ್ಯಗಳಲ್ಲಿ 104 ವಿಕೆಟ್ ಪಡೆದಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com