ಭಾರತದಲ್ಲೇ ಮುಂದಿನ ಟಿ20 ವಿಶ್ವಕಪ್

ನಿರೀಕ್ಷೆಯಂತೆ ಟಿ20 ವಿಶ್ವ ಕಪ್ 7ನೇ ಆವೃತ್ತಿ(2021)ಯ ಆತಿಥ್ಯದ ಹಕ್ಕನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ. 2023ರಲ್ಲಿ ಏಕದಿನ ವಿಶ್ವ ಕಪ್ ಕೂಡ ಭಾರತದಲ್ಲೇ ನಡೆಯಲಿದೆ.
ಟಿ20 ವಿಶ್ವಕಪ್
ಟಿ20 ವಿಶ್ವಕಪ್
Updated on: 

ನವದೆಹಲಿ: ನಿರೀಕ್ಷೆಯಂತೆ ಟಿ20 ವಿಶ್ವ ಕಪ್ 7ನೇ ಆವೃತ್ತಿ(2021)ಯ ಆತಿಥ್ಯದ ಹಕ್ಕನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ. 2023ರಲ್ಲಿ ಏಕದಿನ ವಿಶ್ವ ಕಪ್ ಕೂಡ ಭಾರತದಲ್ಲೇ ನಡೆಯಲಿದೆ.

2020ರಲ್ಲಿ ನಡೆಯಬೇಕಿದ್ದ ಟಿ20 ವಿಶ್ವ ಕಪ್ 6ನೇ ಆವೃತ್ತಿ 2022ಕ್ಕೆ ಮುಂದೂಡಿಕೆಯಾಗಿದೆ. ಆ ಆವೃತ್ತಿಗೆ ಆಸ್ಟ್ರೇಲಿಯಾ ಆತಿಥ್ಯ ವಹಿಸಲಿದೆ. ಈ ವರ್ಷ ಅಕ್ಟೋಬರ್ 18ರಿಂದ ನವೆಂಬರ್ 15ರ ತನಕ ಆಸ್ಟ್ರೇಲಿಯಾದಲ್ಲಿ 6ನೇ ಆವೃತ್ತಿ ನಡೆಯಬೇಕಿತ್ತು. ಆದರೆ ಕೋವಿಡ್ 19 ಪಿಡುಗಿನ ಭಯದಲ್ಲಿ ಮುಂದೂಡಿಕೆಯಾಗಿತ್ತು.

ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗಳ ಒಮ್ಮತದ ಅಭಿಪ್ರಾಯದ ಆಧಾರದಲ್ಲಿ ಈ ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ಶುಕ್ರವಾರದ ಸಭೆಯ ಬಳಿಕ ಐಸಿಸಿ ಮಂಡಳಿಯ ಸದಸ್ಯರೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com