ಕ್ರಿಕೆಟ್ ನ ಎಲ್ಲಾ  ಮಾದರಿಗಳಿಗೆ ಇರ್ಫಾನ್ ಪಠಾಣ್ ವಿದಾಯ

ಭಾರತ ಕ್ರಿಕೆಟ್ ತಂಡದ ವೇಗಿ ಇರ್ಫಾನ್ ಪಠಾಣ್ ಕ್ರಿಕೆಟ್ ನ ಎಲ್ಲಾ ಫಾರ್ಮ್ಯಾಟ್ ಗಳಿಂದ ನಿವೃತ್ತಿ ಘೋಷಿಸಿದ್ದಾರೆ. 
ಕ್ರಿಕೆಟ್ ನ ಎಲ್ಲಾ  ಮಾದರಿಗಳಿಗೆ ಇರ್ಫಾನ್ ಪಠಾಣ್ ವಿದಾಯ
ಕ್ರಿಕೆಟ್ ನ ಎಲ್ಲಾ  ಮಾದರಿಗಳಿಗೆ ಇರ್ಫಾನ್ ಪಠಾಣ್ ವಿದಾಯ
Updated on: 

ಭಾರತ ಕ್ರಿಕೆಟ್ ತಂಡದ ವೇಗಿ ಇರ್ಫಾನ್ ಪಠಾಣ್ ಕ್ರಿಕೆಟ್ ನ ಎಲ್ಲಾ ಫಾರ್ಮ್ಯಾಟ್ ಗಳಿಂದ ನಿವೃತ್ತಿ ಘೋಷಿಸಿದ್ದಾರೆ. 

ಎಡಗೈ ವೇಗಿಯಾಗಿರುವ ಇರ್ಫಾನ್ ಪಠಾಣ್, ಈ ವರೆಗೂ 29 ಟೆಸ್ಟ್ ಗಳು, 120 ಅಂತಾರಾಷ್ಟ್ರೀಯ ಏಕದಿನ, 24 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದು 301 ವಿಕೆಟ್ ಗಳನ್ನು ಪಡೆದಿದ್ದಾರೆ. 

2003 ರ ಡಿಸೆಂಬರ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯವನ್ನಾಡಿದ್ದ ಪಠಾಣ್ ಗೆ ಆಗಿನ್ನೂ 19 ವರ್ಷ, ಆ ಪಂದ್ಯದಲ್ಲಿ 160 ರನ್ ನೀಡಿ 1 ವಿಕೆಟ್ ಗಳಿಸಿದ್ದರು. ಮ್ಯಾಥ್ಯೂ ಹೇಡನ್ ಪಠಾಣ್ ಬೌಲಿಂಗ್ ಗೆ ಬಲಿಯಾದ ಮೊದಲ ಬ್ಯಾಟ್ಸ್ ಮನ್. 35 ವರ್ಷದ ಪಠಾಣ್ 2017 ರಲ್ಲಿ ಕೊನೆಯ ಐಪಿಎಲ್ ಪಂದ್ಯವನ್ನಾಡಿದ್ದರು. ನಂತರದ 3 ಹರಾಜಿನಲ್ಲಿಯೂ ಪಠಾಣ್ ಬಿಕರಿಯಾಗದೇ ಉಳಿದಿದ್ದರು. 
 
Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com