2ನೇ ಟಿ20 ಪಂದ್ಯ: ಟೀಂ ಇಂಡಿಯಾಗೆ 133 ರನ್ ಗುರಿ ನೀಡಿದ ನ್ಯೂಜಿಲೆಂಡ್

ಭಾರತ ತಂಡದ ಬೌಲರ್ ಗಳ ಶಿಸ್ತುಬದ್ಧ ದಾಳಿಗೆ ನಲುಗಿದ ನ್ಯೂಜಿಲೆಂಡ್ ತಂಡ ಎರಡನೇ ಟಿ-20 ಪಂದ್ಯದಲ್ಲಿ ಭಾರತಕ್ಕೆ 133 ರನ್ ಸುಲಭ ಮೊತ್ತದ ಗುರಿ ನೀಡಿದೆ.
ಟೀಂ ಇಂಡಿಯಾ
ಟೀಂ ಇಂಡಿಯಾ
Updated on: 

ಆಕ್ಲೆಂಡ್: ಭಾರತ ತಂಡದ ಬೌಲರ್ ಗಳ ಶಿಸ್ತುಬದ್ಧ ದಾಳಿಗೆ ನಲುಗಿದ ನ್ಯೂಜಿಲೆಂಡ್ ತಂಡ ಎರಡನೇ ಟಿ-20 ಪಂದ್ಯದಲ್ಲಿ ಭಾರತಕ್ಕೆ 133 ರನ್ ಸುಲಭ ಮೊತ್ತದ ಗುರಿ ನೀಡಿದೆ.

ಇಲ್ಲಿನ, ಈಡನ್ ಪಾರ್ಕ್ ಅಂಗಳದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆತಿಥೇಯ ನ್ಯೂಜಿಲೆಂಡ್, ನಿಗದಿತ 20 ಓವರ್ ಗಳಿಗೆ ಐದು ವಿಕೆಟ್ ನಷ್ಟಕ್ಕೆ 132 ರನ್ ದಾಖಲಿಸಿದೆ. ಆ ಮೂಲಕ ಟೀಮ್ ಇಂಟಿಯಾಗೆ 133 ರನ್ ಸಾಧಾರಣ ಗುರಿ ನೀಡಿದೆ.

ಕಳೆದ ಶುಕ್ರವಾರ ಇದೇ ಅಂಗಳದಲ್ಲಿ ನಡೆದಿದ್ದ ಮೊದಲನೇ ಟಿ-20 ಪಂದ್ಯದಲ್ಲಿ ರನ್ ಹೊಳೆ ಹರಿಸಿದ್ದ ನ್ಯೂಜಿಲೆಂಡ್ ತಂಡಕ್ಕೆ ಇಂದಿನ ಪಂದ್ಯದಲ್ಲಿ ಅದೇ ಲಯ ಮುಂದುವರಿಸಲು ಸಾಧ್ಯವಾಗಲಿಲ್ಲ. ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಭಾರತದ ಬೌಲರ್ ಗಳು ಇಂದಿನ ಹಣಾಹಣಿಯಲ್ಲಿ ಕಿವೀಸ್ ದಾಂಡಿಗರನ್ನು ಸಂಪೂರ್ಣ ನಿಯಂತ್ರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com