ಎಂಎಸ್ ಧೋನಿ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಲು ಚಾರ್ಟರ್ ವಿಮಾನದಲ್ಲಿ ಹೋದ ಪಾಂಡ್ಯ ಸಹೋದರರು, ವಿಡಿಯೋ!

2011ರ ವಿಶ್ವಕಪ್ ವಿಜೇತ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಲು ಪಾಂಡ್ಯ ಸಹೋದರರು ಚಾರ್ಟರ್ ವಿಮಾನದಲ್ಲಿ ಹೋಗಿದ್ದರು.
ಕೃನಾಲ್-ಹಾರ್ದಿಕ್
ಕೃನಾಲ್-ಹಾರ್ದಿಕ್
Updated on: 

ರಾಂಚಿ: 2011ರ ವಿಶ್ವಕಪ್ ವಿಜೇತ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಲು ಪಾಂಡ್ಯ ಸಹೋದರರು ಚಾರ್ಟರ್ ವಿಮಾನದಲ್ಲಿ ಹೋಗಿದ್ದರು. 

ಜುಲೈ 7ಕ್ಕೆ ಧೋನಿ ಅವರು 39 ವರ್ಷಕ್ಕೆ ಕಾಲಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ವಡೋದರದಿಂದ ರಾಂಚಿಗೆ ಚಾರ್ಟರ್ ವಿಮಾನದಲ್ಲಿ ತೆರಳಿದ್ದು ಧೋನಿಗೆ ಶುಭಾಶಯ ತಿಳಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. 

 
 
 
 
 
 
 
 
 
 
 
 
 

Let The Celebrations Begin !!

A post shared by MS Dhoni Fans Club (@dhoni.bhakt) on

ಎಂಎಸ್ ಧೋನಿ ಅವರು 350 ಏಕದಿನ ಪಂದ್ಯಗಳನ್ನಾಡಿದ್ದು ಪಂದ್ಯವೊಂದರಲ್ಲಿ 183 ರನ್ ಬಾರಿದ್ದಾರೆ. ಇನ್ನು ಮಹತ್ವದ ಐಸಿಸಿ ಟೂರ್ನಿಗಳಾದ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ ಮತ್ತು ಚಾಂಪಿಯನ್ ಟ್ರೋಫಿ ಗೆಲ್ಲಿಸಿಕೊಟ್ಟ ಕೀರ್ತಿ ಧೋನಿಯವರದ್ದು.

2017ರಲ್ಲಿ ಧೋನಿ ತಮ್ಮ ನಾಯಕ ಸ್ಥಾನಕ್ಕೆ ವಿದಾಯ ಘೋಷಿಸಿದ್ದರು. ಬಳಿಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ಟೀಂ ಇಂಡಿಯಾ ತಂಡದ ನಾಯಕತ್ವ ವಹಿಸಿಕೊಂಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com